Advertisement

ಭೀತಿ ಹುಟ್ಟಿಸುವ ಐಪಿಎಲ್‌ ತಂಡ ಪ್ರಕಟಿಸಿದ ಹಸ್ಸಿ

11:19 PM Jul 03, 2020 | Sriram |

ಹೊಸದಿಲ್ಲಿ: ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಹಸ್ಸಿ ತುಸು ವಿಭಿನ್ನ ಮಾದರಿಯ ಐಪಿಎಲ್‌ ತಂಡವೊಂದನ್ನು ಪ್ರಕಟಿಸಿದ್ದಾರೆ. ಇದು ಭೀತಿ ಹುಟ್ಟಿಸುವ ಆಟಗಾರರ ಇಲೆವೆನ್‌! ಇದಕ್ಕೆ ಮಹೇಂದ್ರ ಸಿಂಗ್‌ ಧೋನಿ ನಾಯಕರಾಗಿದ್ದಾರೆ.

Advertisement

ಐಪಿಎಲ್‌ನಲ್ಲಿ ಅತ್ಯಧಿಕ ರನ್‌ ಗಳಿಸಿರುವ ವಿದೇಶಿ ಆಟಗಾರನೆಂಬ ಖ್ಯಾತಿಯ ಡೇವಿಡ್‌ ವಾರ್ನರ್‌, ಆರ್‌ಸಿಬಿಯ ತಾರಾ ಆಟಗಾರರಾದ ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿಯರ್, ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ, ಆ್ಯಂಡ್ರೆ ರಸೆಲ್‌ ಮೊದಲಾದವರು ಈ ತಂಡದಲ್ಲಿದ್ದಾರೆ.

ಆದರೆ ಟಿ20 ಇತಿಹಾಸದಲ್ಲೇ ಅತ್ಯಧಿಕ ವಿಕೆಟ್‌ ಉರುಳಿಸಿರುವ ಲಸಿತ ಮಾಲಿಂಗ ಸ್ಥಾನ ಪಡೆಯುವಲ್ಲಿ ವಿಫ‌ಲರಾಗಿದ್ದಾರೆ. ಹಾಗೆಯೇ ವಿಧ್ವಂಸಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಕೂಡ ಕಾಣಿಸಿಕೊಂಡಿಲ್ಲ. ಕೆ.ಎಲ್‌. ರಾಹುಲ್‌ 12ನೇ ಆಟ ಗಾರನಾಗಿದ್ದಾರೆ.

ಮೈಕಲ್‌ ಹಸ್ಸಿ ತಂಡ: ರೋಹಿತ್‌ ಶರ್ಮ, ಡೇವಿಡ್‌ ವಾರ್ನರ್‌, ವಿರಾಟ್‌ ಕೊಹ್ಲಿ, ಎಬಿ ಡಿ ವಿಲಿಯರ್, ಮಹೇಂದ್ರ ಸಿಂಗ್‌ ಧೋನಿ (ನಾಯಕ/ವಿ.ಕೀ.), ಹಾರ್ದಿಕ್‌ ಪಾಂಡ್ಯ, ಆ್ಯಂಡ್ರೆ ರಸೆಲ್‌, ರಶೀದ್‌ ಖಾನ್‌, ಯಜುವೇಂದ್ರ ಚಹಲ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ. 12ನೇ ಆಟಗಾರ: ಕೆ.ಎಲ್‌. ರಾಹುಲ್‌.

Advertisement

Udayavani is now on Telegram. Click here to join our channel and stay updated with the latest news.

Next