Advertisement

ಬುಮ್ರಾ ತುಂಬಾ ವರ್ಷ ಕ್ರಿಕೆಟ್ ಆಡುವುದು ಅನುಮಾನ: ಮೈಕಲ್ ಹೋಲ್ಡಿಂಗ್

11:16 AM May 14, 2020 | keerthan |

ಮುಂಬೈ: ಜಸ್ಪ್ರೀತ್ ಬುಮ್ರಾ ಕಳೆದ 3-4 ವರ್ಷಗಳಿಂದ ಟೀಂ ಇಂಡಿಯಾ ಪ್ರಮುಖ ಬೌಲಿಂಗ್ ಅಸ್ತ್ರ. ಪ್ರತಿಯೊಂದು ಎಸೆತದಲ್ಲೂ ಎದುರಾಳಿ ಬ್ಯಾಟ್ಸಮನ್  ಗಳಿಗೆ ಕಂಟಕವಾಗುವ ಬುಮ್ರಾ ಬೌಲಿಂಗ್ ಶೈಲಿಯ ಬಗ್ಗೆ ವೆಸ್ಟ್ ಇಂಡೀಸ್ ದಿಗ್ಗಜ ಮೈಕಲ್ ಹೋಲ್ಡಿಂಗ್ ಮಾತನಾಡಿದ್ದಾರೆ.

Advertisement

ಬುಮ್ರಾ ಬೌಲಿಂಗ್ ಮಾಡಲು ಹೆಚ್ಚು ದೂರದಿಂದ ಓಡಿ ಬರುವುದಿಲ್ಲ. ಕಡಿಮೆ ರನ್ ಅಪ್ ನಲ್ಲಿ ಬಂದು ಬೌಲಿಂಗ್ ಮಾಡುವು ಕಾರಣದಿಂದ ಬುಮ್ರಾ ತನ್ನ ದೇಹದಿಂದಲೇ ವೇಗವನ್ನು ಪಡೆಯುತ್ತಾರೆ. ಇದಿರಂದ ದೇಹಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂದು ಹೋಲ್ಡಿಂಗ್ ಹೇಳಿದ್ದಾರೆ.

ಬುಮ್ರಾ ಕಡಿಮೆ ದೂರದಿಂದ ಓಡಿಬಂದು ಚೆಂಡನ್ನು ಡೆಕ್ ಗೆ ಬಲವಾಗಿ ಬಡಿಯುತ್ತಾರೆ. ಇದರಿಂದ ದೇಹಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ದೀರ್ಘ ಸಮಯದವರೆಗೆ ಬೌಲಿಂಗ್ ನಡೆಸುವುದು ಕಷ್ಟ. ಮಾನವ ದೇಹ ಅಷ್ಟು ಒತ್ತಡ ತಡೆದುಕೊಳ್ಳುವುದು ಕಷ್ಟ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next