Advertisement

ಮಿಯಾಂದಾದ್‌ ದಾಖಲೆ ಮುರಿದ ಬಾಬರ್‌ ಆಜಂ

10:15 AM Oct 02, 2019 | Team Udayavani |

ಕರಾಚಿ: ಶ್ರೀಲಂಕಾ ಎದುರಿನ ಸೋಮವಾರದ ಕರಾಚಿ ಏಕದಿನ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ಬಾಬರ್‌ ಆಜಂ 2019ರ ಕ್ಯಾಲೆಂಡರ್‌ ವರ್ಷದಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದ ಪಾಕಿಸ್ಥಾನದ ಮೊದಲ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಅತೀ ಕಡಿಮೆ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆಗೈದು ಪಾಕ್‌ ದಾಖಲೆ ಬರೆದರು.

Advertisement

1987ರಲ್ಲಿ ಜಾವೇದ್‌ ಮಿಯಾಂದಾದ್‌ 21 ಇನ್ನಿಂಗ್ಸ್‌ ಗಳಿಂದ ಕ್ಯಾಲೆಂಡರ್‌ ವರ್ಷದಲ್ಲಿ ಸಾವಿರ ರನ್‌ ಗಳಿಸಿದ್ದು ಪಾಕಿಸ್ಥಾನದ ಈವರೆಗಿನ ಏಕದಿನ ದಾಖಲೆಯಾಗಿತ್ತು.

ಬಾಬರ್‌ ಆಜಂ ಅವರ 115 ರನ್‌ ಸಾಹಸದಿಂದ (105 ಎಸೆತ, 8 ಬೌಂಡರಿ, 4 ಸಿಕ್ಸರ್‌) ಲಂಕಾ ಎದುರು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ 7 ವಿಕೆಟಿಗೆ 305 ರನ್‌ ಪೇರಿಸಿದೆ. ಆರಂಭಕಾರ ಫ‌ಕಾರ್‌ ಜಮಾನ್‌ 51, ಹ್ಯಾರಿಸ್‌ ಸೊಹೈಲ್‌ 40 ರನ್‌ ಮಾಡಿದರು. ಲಂಕಾ ಪರ ವನಿಂದು ಹಸರಂಗ 63 ರನ್ನಿತ್ತು 2 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next