Advertisement

ಮಯಾಮಿ ಓಪನ್‌ ಟೆನಿಸ್‌ ಒಸಾಕಾ ಬಲೆಗೆ ಬಿದ್ದ ಸೆರೆನಾ

07:30 AM Mar 23, 2018 | Team Udayavani |

ಮಯಾಮಿ (ಫ್ಲೋರಿಡಾ): ತಾಯಿಯಾದ ಬಳಿಕ ಸ್ಪರ್ಧಾತ್ಮಕ ಟೆನಿಸ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಅಮೆರಿಕದ ಸೆರೆನಾ ವಿಲಿಯಮ್ಸ್‌ಗೆ ಮತ್ತೂಂದು ಆಘಾತ ಎದುರಾಗಿದೆ. ಅವರು ಮಯಾಮಿ ಓಪನ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಈ ದೊಡ್ಡ ಬೇಟೆಯಾಡಿದ ಹೆಗ್ಗಳಿಕೆ ಜಪಾನಿನ ಉದಯೋನ್ಮುಖ ಆಟಗಾರ್ತಿ ನವೋಮಿ ಒಸಾಕಾ ಅವರದು. 

Advertisement

ಕಳೆದ ವಾರಾಂತ್ಯದಲ್ಲಿ ಇಂಡಿಯಾನ ವೇಲ್ಸ್‌ ಟೆನಿಸ್‌ ಪ್ರಶಸ್ತಿ ಗೆದ್ದ ಹುರುಪಿನಲ್ಲಿದ್ದ ನವೋಮಿ ಒಸಾಕಾ ಅಮೆರಿಕನ್‌ ಆಟಗಾರ್ತಿಯ ವಿರುದ್ಧ ಒಂದು ಗಂಟೆ, 17 ನಿಮಿಷಗಳ ಕಾಲ ಹೋರಾಡಿ 6-3, 6-2 ನೇರ ಸೆಟ್‌ ಜಯ ಸಾಧಿಸುವಲ್ಲಿ ಯಶಸ್ವಿಯಾದರು. ತವರಿನ ಹಾರ್ಡ್‌ಕೋರ್ಟ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೆರೆನಾ ಎಡವುತ್ತಿರುವುದು ಇದೇ ಮೊದಲು. 

“ಆರಂಭದಲ್ಲಿ ನಾನು ನರ್ವಸ್‌ ಆಗಿದ್ದೆ. ಆದರೆ ಪಂದ್ಯ ಮುಂದುವರಿದಂತೆಲ್ಲ ಆತ್ಮವಿಶ್ವಾಸ ಮೂಡುತ್ತ ಹೋಯಿತು’ ಎಂಬುದು ಒಸಾಕಾ ಪ್ರತಿಕ್ರಿಯೆ. ಜಪಾನಿ ಆಟಗಾರ್ತಿಯ ಮುಂದಿನ ಸುತ್ತಿನ ಎದುರಾಳಿ ಉಕ್ರೇನಿನ ಎಲಿನಾ ಸ್ವಿಟೋಲಿನಾ. 

Advertisement

Udayavani is now on Telegram. Click here to join our channel and stay updated with the latest news.

Next