Advertisement
ಕ್ವಾರ್ಟರ್ ಫೈನಲ್‌ನಲ್ಲಿ ಫೆಡರರ್ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು 6-0, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ಫೆಡರರ್‌ಗೆ ಮುಂದಿನ ಎದುರಾಳಿ ಕೆನಡಾದ ಡೆನ್ನಿಸ್ ಶಪೊವಲೋವ್. 20ನೇ ಶ್ರೇಯಾಂಕದ ಶಪೊವಲೋವ್ ಅಮೆರಿಕದ ಫ್ರಾನ್ಸೆಸ್ ಟಿಯೋಫ್ ವಿರುದ್ಧ 6-7 (6-5), 6-4, 6-2ರಿಂದ ಜಯ ಸಾಧಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿದ್ದ ರೊಮೇನಿಯದ ಸಿಮೋನಾ ಹಾಲೆಪ್ ಆಘಾತ ಅನುಭವಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಹಾಲೆಪ್ ಜೆಕ್ ಗಣರಾಜ್ಯದ ಕ್ಯಾರೋಲಿನ್ ಪ್ಲಿಸ್ಕೋವಾ ವಿರುದ್ಧ 5-7, 1-6ರಿಂದ ಮುಗ್ಗರಿಸಿದರು. ಹಾಲೆಪ್ ಫೈನಲ್ ಪ್ರವೇಶಿಸಿದ್ದರೆ ಮತ್ತೆ ನಂ.1 ರ್‍ಯಾಂಕಿಂಗ್ ಪಡೆಯಬಹುದಿತ್ತು. ಪ್ಲಿಸ್ಕೋವಾ ಫೈನಲ್‌ನಲ್ಲಿ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಅವರನ್ನು ಎದುರಲಿಸದ್ದಾರೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾರ್ಟಿ ಎಸ್ತೋನಿಯಾದ ಅನೆಟ್ ಕೊಂಟವೀಟ್ ವಿರುದ್ಧ 6-3, 6-3 ಜಯ ಸಾಧಿಸಿದರು.