Advertisement
ರವಿವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಫೆಡರರ್ ಹಾಲಿ ಚಾಂಪಿಯನ್ ಜಾನ್ ಇಸ್ನರ್ ವಿರುದ್ದ ಕೇವಲ 63 ನಿಮಿಷಗಳಲ್ಲಿ 6-1, 6-4 ನೇರ ಸೆಟ್‌ಗಳ ಗೆಲುವು ದಾಖಲಿಸಿದರು. ಇದು ಫೆಡರರ್ ವೃತ್ತಿಜೀವನ 101 ಪ್ರಶಸ್ತಿಯಾಗಿದೆ.
2015ರ ಪ್ಯಾರಿಸ್ ಮಾಸ್ಟರ್ ಕೂಟದಲ್ಲಿ ಫೆಡರರ್ ವಿರುದ್ಧ ಗೆಲುವು ದಾಖಲಿಸಿದ್ದ ಇಸ್ನರ್‌ಗೆ ಈ ಕೂಟದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಇದು ಫೆಡರರ್ ಅವರ 154ನೇ ಟೂರ್ ಫೈನಲ್ ಆಗಿದ್ದು, 50ನೇ ಎಟಿಪಿ ಮಾಸ್ಟರ್ ಫೈನಲ್ ಆಗಿದೆ. ಇದು ಫೆಡರರ್ ಗೆದ್ದ 28ನೇ ಮಾಸ್ಟರ್ ಪ್ರಶಸ್ತಿಯಾಗಿದೆ.
Related Articles
Advertisement
ಮುಂದಿನ ಮಾಂಟೆ ಕಾರ್ಲೊ ಮಾಸ್ಟರ್ ಕೂಟದಲ್ಲಿ ಫೆಡರರ್ ಭಾಗವಹಿಸುತ್ತಿಲ್ಲ. ಮೇ ತಿಂಗಳ ಆರಂಭದಲ್ಲಿ ನಡೆಯಲಿರುವ ಮ್ಯಾಡ್ರಿಡ್‌ನಲ್ಲಿ ಸ್ಪರ್ಧಿಸಲಿದ್ದಾರೆ.