Advertisement

ಮಯಾಮಿ ಓಪನ್‌: ಜೊಕೋ, ಕ್ವಿಟೋವಾ ಪರಾಭವ

03:06 AM Mar 28, 2019 | Sriram |

ಮಯಾಮಿ : ಏಳನೇ “ಮಯಾಮಿ ಓಪನ್‌’ ಪ್ರಶಸ್ತಿ ಜಯಿಸುವ ನಿರೀಕ್ಷೆಯಲ್ಲಿದ್ದ ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದ್ದಾರೆ.

Advertisement

ಜೊಕೋವಿಕ್‌ 2 ಗಂಟೆ, 29 ನಿಮಿಷಗಳ ಹೋರಾಟದ ಅನಂತರ ಸ್ಪೇನಿನ ರಾಬರ್ಟೊ ಬಟಿಸ್ಟ ಅಗುಟ್‌ ವಿರುದ್ಧ 6-1, 5-7, 3-6ರಿಂದ ಪರಾಭವಗೊಂಡರು.

ಕ್ವಿಟೋವಾಗೆ ಸೋಲುಣಿಸಿದ ಬಾರ್ಟಿ ವನಿತಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಚೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ಅವರನ್ನು 7-6 (8-6), 3-6, 6-2ರಿಂದ ಆಘಾತವಿಕ್ಕಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಎಸ್ತೋನಿಯಾದ ಅನೆಟ್‌ ಕೊಂಟವೀಟ್‌ ತೈವಾನ್‌ನ ಸೀ ಸು-ವೀ ವಿರುದ್ಧ 3-6, 6-2, 7-5ರಿಂದ ಗೆದ್ದು ಮೊದಲ ಬಾರಿಗೆ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next