Advertisement

108 ಮೆಗಾಫಿಕ್ಸೆಲ್ ಕ್ಯಾಮರಾವಿರುವ ಎಂಐ ನೋಟ್ 10 ಅತೀ ಶೀಘ್ರದಲ್ಲಿ ಮಾರುಕಟ್ಟೆಗೆ

09:30 AM Nov 06, 2019 | Mithun PG |

ಮಣಿಪಾಲ: ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕ ಕಂಪೆನಿ ಶಿಯೋಮಿ ಸಾಮಾಜಿಕ ಜಾಲಾತಾಣದಲ್ಲಿ ನೂತನ ಫೋನ್ ಮಾರುಕಟ್ಟೆಗೆ ತರುವ ಕುರಿತು ಪ್ರಕಟಿಸಿದೆ. ಎಂ ಐ ನೋಟ್ 10 ಹೆಸರಿನ ಸ್ಮಾರ್ಟ್ ಫೋನ್ ಇದೇ ನವೆಂಬರ್ 6 ರಂದು ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ಬಿಡುಗಡೆಯಾಗಲಿದೆ.

Advertisement

ಎಂ ಐ ನೋಟ್ 10 ನ ಅತೀ ಪ್ರಮುಖ ವಿಶೇಷತೆ ಎಂದರೇ  108 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮಾರವನ್ನು ಒಳಗೊಂಡಿರಲಿದೆ. ಈ ಫೋನ್ ಚೀನಾದಲ್ಲಿ ನವೆಂಬರ್ 5 ರಂದು ಬಿಡುಗಡೆಯಾಗಲಿರುವ ಎಂಐ ಸಿಸಿ9 ಜಾಗತಿಕ ರೂಪಾಂತರವಾಗಿದೆ. 2017 ರಲ್ಲಿ ಎಂಐ ನೋಟ್ 3 ಅಧಿಕೃತವಾಗಿ ಜಾರಿಗೆ ಬಂದಾಗಿನಿಂದ ಅಪ್ಡೇಟ್ ಅನ್ನು ಕಂಡಿರಲಿಲ್ಲ.

ಎಂಐ ನೋಟ್ 10 ವಿಶೇಷತೆ:

ಈ ಸ್ಮಾರ್ಟ್ ಫೋನ್ ಓಕ್ಟಾ ಕೋರ್ ಕ್ವಾಲ್ ಕ್ವಾಮ್ ಸ್ನ್ಯಾಪ್ ಡ್ರ್ಯಾಗನ್ 660 SoC ಮತ್ತು ಪೆಂಟಾ ಕ್ಯಾಮಾರಗಳನ್ನು ಒಳಗೊಂಡಿದೆ.  108 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮಾರ ಸೆನ್ಸಾರ್ ಅನ್ನು ಒಳಗೊಂಡಿರಲಿದೆ. ಈ ಸೆನ್ಸಾರ್ 10x ಹೈಬ್ರೀಡ್ ಜೂಮ್ ಮತ್ತು 50x ವರೆಗೂ ವಿಸ್ತರಿಸಬಹುದಾದ ಡಿಜಿಟಲ್ ಜೂಮ್ ಆಗಿರಲಿದೆ ಎನ್ನುವುದೇ ವಿಶೇಷ. 12 ಮೆಗಾಫಿಕ್ಸೆಲ್ ದ್ವಿತೀಯ ಸೆನ್ಸಾರ್ ಪೊರ್ಟ್ರೇಟ್ ಶಾಟ್ ಅನ್ನು ಹೊಂದಿದ್ದರೆ, 50x  ಜೂಮ್ ನವರೆಗೂ ವಿಸ್ತರಿಸಬಹುದಾದ 5 ಮೆಗಾಫಿಕ್ಸೆಲ್ ತೃತೀಯ ಸಂವೇದಕ(ಸೆನ್ಸಾರ್) ಅನ್ನು ಒಳಗೊಂಡಿದೆ.

ಅಂದಾಜಿಸಲಾಗಿರುವ ಹೋಸ ಫೀಚರ್ ಗಳು:

Advertisement

ಶಿಯೋಮಿ ಎಂಐ ಸಿಸಿ 9 ಪ್ರೊ ನಲ್ಲಿ ಪರಿಚಯಿಸಿರುವ 32 ಮೆಗಾಫಿಕ್ಸೆಲ್ ಸೆಲ್ಫಿ ಕ್ಯಾಮಾರ ಇದರಲ್ಲಿ ಕೂಡ ಇರಬಹುದೆಂದು ಅಂದಾಜಿಸಲಾಗಿದೆ. ಇದರ ಜೊತೆಗೆ 12 ವಿಶೇಷ ಫಿಲ್ಟರ್ಸ್ ಅನ್ನು ಒಳಗೊಂಡಿರಲಿದೆ. 6 ಜಿಬಿ, 8 ಜಿಬಿ ಮತ್ತು 12ಜಿಬಿ ರ್ಯಾಮ್ ಆಯ್ಕೆಗಳು , 64ಜಿಬಿ, 128ಜಿಬಿ ಮತ್ತು 256 ಜಿಬಿ ವರೆಗೂ ವಿಸ್ತರಿಸಬಹುದಾದ ಸ್ಟೋರೇಜ್ . 6.47 ಇಂಚು ಫುಲ್  ಹೆಚ್ ಡಿ ಪ್ಲಸ್ (1080*2340) ಓಎಲ್ ಇಡಿ ಡಿಸ್ ಪ್ಲೇ ಅನ್ನು ಒಳಗೊಂಡಿರಲಿದೆ.

ಈ ಕುರಿತು ಶಿಯೋಮಿ ತನ್ನ ಟ್ಟಿಟ್ಟರ್ ಅಧಿಕೃತ ಖಾತೆಯಲ್ಲಿ ದಾಖಲಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next