ಮುಂಬೈ: ಕ್ರಿಕೆಟ್ ನಲ್ಲಿ ಒಂದು ಹಂತಕ್ಕೆ ತಲುಪಬೇಕು, ದೊಡ್ಡ ಸಾಧನೆ ಮಾಡುಬೇಕು ಎಂಬ ಕಾರಣದಿಂದ ಮನೆಯಿಂದ ದೂರವಿದ್ದು ಕಠಿಣ ಅಭ್ಯಾಸ ನಡೆಸಿದ್ದ ಬೌಲರ್ ಕುಮಾರ ಕಾರ್ತಿಕೇಯ ಸುಮಾರು ಒಂಬತ್ತು ವರ್ಷಗಳ ಬಳಿಕ ಮನೆಗೆ ಮರಳಿದ್ದಾರೆ.
ದೇಶಿಯ ಕ್ರಿಕೆಟ್ ನಲ್ಲಿ ಮಧ್ಯಪ್ರದೇಶದ ಪರ ಮತ್ತು ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುವ ಕುಮಾರ ಕಾರ್ತಿಕೇಯ ಒಂಬತ್ತು ವರ್ಷ ಮೂರು ತಿಂಗಳ ಬಳಿಕ ಮನೆಗೆ ತೆರಳಿ ತಾಯಿಯನ್ನು ಭೇಟಿ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.
ಉತ್ತರ ಪ್ರದೇಶ ಮೂಲದವರಾದ ಕುಮಾರ ಕಾರ್ತಿಕೇಯ ಅವರು ಸುಮಾರು ಒಂಬತ್ತು ವರ್ಷಗಳ ಹಿಂದೆ ದೆಹಲಿಯಲ್ಲಿ ಕ್ರಿಕೆಟ್ ಅಕಾಡೆಮಿ ಸೇರಿದ್ದರು. ನಂತರ ರಣಜಿ ಕ್ರಿಕೆಟ್ ಗೆ ಮಧ್ಯ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದರು. ಮಧ್ಯ ಪ್ರದೇಶ ತಂಡ ಮೊದಲ ಬಾರಿ ರಣಜಿ ಕಪ್ ಗೆಲ್ಲುವಲ್ಲಿ ಕಾರ್ತಿಕೇಯ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ:ಮುದ್ದಾದ ಮೂತಿ ಮನಸ್ಸು ಮರಕೋತಿ.. ಮಾನ್ಸೂನ್ ರಾಗದ ಮತ್ತೊಂದು ಹಾಡು
ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮೊದಲು ಬಿಕರಿಯಾಗದ ಕುಮಾರ ಕಾರ್ತಿಕೇಯ ನಂತರ ಅರ್ಶದ್ ಖಾನ್ ಗಾಯದ ಕಾರಣದಿಂದ ಮುಂಬೈ ತಂಡಕ್ಕೆ ಸೇರಿದ್ದರು. ಅಲ್ಲಿ ಆಡುವ ಅವಕಾಶ ಕೂಡಾ ಪಡೆದಿದ್ದರು.