Advertisement

ಜನವರಿ 5ಕ್ಕೆ ಭಾರತೀಯ ಮಾರುಕಟ್ಟೆಗೆ MI 10i ಸ್ಮಾರ್ಟ್ ಪೋನ್ ಲಗ್ಗೆ: ವಿಶೇಷತೆಗಳೇನು?

08:29 PM Jan 02, 2021 | Team Udayavani |

ನವದೆಹಲಿ: ವಿಶ್ವದ ಬಹುಬೇಡಿಕೆಯ ಎಂಐ ಕಂಪೆನಿಯೂ 2021ರ ಜನವರಿ 5 ರಂದು ತನ್ನ ಹೊಸ ಸರಣಿಯ MI 10i ಸ್ಮಾರ್ಟ್ ಪೋನ್  108 ಮೆಗಾಫಿಕ್ಸೆಲ್ ಕ್ಯಾಮರಾವನ್ನು ಒಳಗೊಂಡಂತೆ ಹಲವು ವಿಭಿನ್ನ ಸೌಲಭ್ಯಗಳನ್ನು ಹೊತ್ತು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

Advertisement

ಈ ಕುರಿತು ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಶಿಯೋಮಿ ಕಂಪನಿಯ ಭಾರತದ ಮ್ಯಾನೇಜಿಂಗ್ ಡೈರೆಕ್ಟರ್ ಮನು ಕುಮಾರ್ ಜೈನ್, MI 10i ಸ್ಮಾರ್ಟ್ ಪೋನ್ ಜನವರಿ 5 ರಂದು ಭಾರತೀಯ ಮಾರುಕಟ್ಟೆಗೆ  ಬಿಡುಗಡೆಗೊಳಿಸಲಿದ್ದೇವೆ ಎಂದಿದ್ದಾರೆ.

.MI 10i ಸ್ಮಾರ್ಟ್ ಪೋನ್ ವಿಶೇಷತೆಗಳೇನು?

MI 10i ಸ್ಮಾರ್ಟ್ ಪೋನ್ ಅನ್ನು ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದ್ದು, 8GB RAM ಅನ್ನು ಹೊಂದಿರಲಿದೆ. ಅಲ್ಲದೆ ಓಕ್ಟಾ ಕೋರ್ SoC ಯನ್ನು ಒಳಗೊಂಡಿದೆ.

ಕ್ಯಾಮರಾ: MI 10i ಸ್ಮಾರ್ಟ್ ಪೋನ್  ಬರೋಬ್ಬರಿ  108 ಮೆಗಾಫಿಕ್ಸೆಲ್ ಪ್ರಾಥಮಿಕ ಕ್ಯಾಮರಾವನ್ನು ಹೊಂದಿದ್ದು, ಅಲ್ಲದೆ ಮೊಬೈಲ್ ನ ಹಿಂಬದಿಯಲ್ಲಿ ನಾಲ್ಕು ಕ್ಯಾಮರಾ ಸೆನ್ಸರ್ ಅನ್ನು ಅಳವಡಿಸಲಾಗಿದೆ.

Advertisement

ಇದನ್ನೂ ಓದಿ:ಶೀಘ್ರದಲ್ಲಿಯೇ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಐ ಪೋನ್ -13

ಈ ಹೊಸ MI 10i ಸ್ಮಾರ್ಟ್ ಪೋನ್ ಎರಡು ರೀತಿಯಲ್ಲಿ ಬಳಕೆದಾರರಿಗೆ ಲಭ್ಯವಾಗಲಿದ್ದು, 6ಜಿಬಿ ಮತ್ತು 8 ಜಿಬಿ RAM  ಸೌಲಭ್ಯದಲ್ಲಿ 128 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಇದು ಒಳಗೊಂಡಿದೆ.

ಬಣ್ಣಗಳ ಲಭ್ಯತೆ: ಈ ಸ್ಮಾರ್ಟ್ ಪೋನ್ ನೀಲಿ, ಕಪ್ಪು, ಗ್ರೇಡಿಯಂಟ್ ಆರೆಂಜ್ ಹಾಗೂ ಗ್ರೇಡಿಯಂಟ್ ಬ್ಲೂ ಬಣ್ಣಗಳಲ್ಲಿ ಲಭ್ಯವಾಗಿವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಕಳೆದ ವಾರವೂ ಶಿಯೋಮಿ  ಸಂಸ್ಥೆ MI 10i  ಸ್ಮಾರ್ಟ್ ಪೋನ್ ಅನ್ನು ಬಿಡುಗಡೆಗೊಳಿಸುವ ಕುರಿತಾ‍ಗಿ ಮಾಹಿತಿ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next