ಬೆಂಗಳೂರು: ಇತ್ತೀಚೆಗೆ ಮಹಾತ್ಮಾ ಗಾಂಧಿ ರಸ್ತೆಯ ಟ್ರಿನಿಟಿ ಮಿತ್ತಲ್ ಟವರ್ ಬಳಿ ಇಮ್ರಾನ್ ಎಂಬಾತ ಸಾವಿಗೀಡಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಇಮ್ರಾನ್‌ನನ್ನು ದುಷ್ಕರ್ಮಿಗಳು ಕೊಂದಿ ದ್ದಾರೆ ಎನ್ನ ಲಾ ಗಿತ್ತು. ಆದರೆ ಇಮ್ರಾನ್ ಕೊಲೆಯಾಗಿಲ್ಲ, ಬದಲಿಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಅಲ್ಲದೆ, ಈತ ಮೊಬೈಲ್ ಕಳ್ಳ ಎಂಬುದು ತನಿಖೆಯಿಂದ ತಿಳಿದು ಬಂದಿರುವುದಾಗಿ ಹಲಸೂರು ಠಾಣೆ ಪೊಲೀಸರು ತಿಳಿಸಿದ್ದಾರೆ.
ಲಾಲ್‌ಬಾಗ್ ರಸ್ತೆಯ ದೊಡ್ಡಮಾವಳ್ಳಿಯ ಸೈಯ್ಯದ್ ಇಮ್ರಾನ್ ಜೂ.17ರಂದು ರಾತ್ರಿ 8 ಗಂಟೆ ಸುಮಾರಿಗೆ ಶಿವಾಜಿನಗರದಲ್ಲಿ ಪತ್ನಿಯೊಂದಿಗೆ ಬಟ್ಟೆ ಖರೀದಿ ಮಾಡಿದ್ದಾನೆ. ಬಳಿಕ ಸ್ನೇಹಿತರಾದ ನಯಾಜ್, ಬೇಗ್, ಫೈರೋಜ್ ಜತೆ ಮಾತನಾಡಿಕೊಂಡು ಬರುವುದಾಗಿ ಪತ್ನಿಗೆ ಹೇಳಿ ಹೋಗಿದ್ದ.
ಮರುದಿನ ನಸುಕಿನ 4 ಗಂಟೆ ಸುಮಾರಿಗೆ ಇಮ್ರಾನ್ ಪತ್ನಿಗೆ ಕರೆ ಮಾಡಿದ ನಯಾಜ್, ಇಮ್ರಾನ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಸಿದ್ದ. ಪತ್ನಿ ಆಸ್ಪತ್ರೆಗೆ ಬರುವಷ್ಟರಲ್ಲಿ ಇಮ್ರಾನ್ ಮೃತಪಟ್ಟಿದ್ದ. ಆದರೆ, ಪತ್ನಿ ಹಣಕಾಸಿನ ವಿಚಾರವಾಗಿ ಸ್ನೇಹಿತರೇ ತನ್ನ ಪತಿಯನ್ನು ಕೊಲೆಗೈದು ಟ್ರಿನಿಟಿ ವೃತ್ತದ ಮಿತ್ತಲ್ ಟವರ್ ಬಳಿ ಎಸೆದು ಹೋಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.
ಈ ಸಂಬಂಧ ತನಿಖೆ ನಡೆಸಿ, ಇಮ್ರಾನ್ ಸ್ನೇಹಿತರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು. “ತಡರಾತ್ರಿ 2.30ರಲ್ಲಿ ತಮ್ಮೊಂದಿಗೆ ಕೋರಮಂಗಲದ ಮೊಬೈಲ್ ಅಂಗಡಿಯೊಂದರಲ್ಲಿ ಕಳ್ಳತನ ನಡೆಸಿ ವಾಪಸ್ ಬರುವಾಗ ಘಟನೆ ನಡೆದಿದೆ. ಎಂ.ಜಿ.ರಸ್ತೆಯಲ್ಲಿ ಮೂತ್ರ ವಿಸರ್ಜನೆಗೆಂದು ಇಮ್ರಾನ್ ಬೈಕ್ ನಿಲ್ಲಿಸಿದ್ದ.
ಆ ವೇಳೆ ವೇಗವಾಗಿ ಬಂದ ಟೆಂಪೊ ಟ್ರಾವೆಲರ್ ವಾಹನ ಇಮ್ರಾನ್‌ಗೆ ಡಿಕ್ಕಿ ಹೊಡೆದಿತ್ತು. ಬಳಿಕ ಹಿಂದಿನಿಂದ ಬರುತ್ತಿದ್ದ ಮತ್ತೂಂದು ಕಾರು ಇಮ್ರಾನ್ ಮೇಲೆ ಹರಿದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಆತ ನನ್ನು ಆಸ್ಪತ್ರೆಗೆ ದಾಖಲಿಸಿ, ಆತನ ಪತ್ನಿಗೆ ವಿಚಾರ ತಿಳಿಸಿದ್ದೆವು. ಆದರೆ, ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ,’ ಎಂದು ನಯಾಜ್ ಹೇಳಿಕೆ ನೀಡಿದ್ದ.
ಈ ಹಿನ್ನೆಲೆಯಲ್ಲಿ ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ದೃಢಪಟ್ಟಿದೆ. ಜತೆಗೆ ಮರಣೋತ್ತರ ಪರೀಕ್ಷೆ ವರ ದಿ ಯಲ್ಲೂ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ದೃಢವಾಗಿದೆ. ಹೀಗಾಗಿ ಪ್ರಕರಣವನ್ನು ಹಲಸೂರು ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾ ರೆ.