Advertisement
ಎಂಜಿ ಹೆಕ್ಟರ್ ಕಾರಿನ ವಿನ್ಯಾಸಕ್ಕೆ ಗ್ರಾಹಕರು ಪುಲ್ ಫಿಧಾ ಆಗಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಧಿಕ ಮಟ್ಟದಲ್ಲಿ ಮಾರಾಟವಾಗುತ್ತಿದೆ.ಮಾರಾಟ ಹೆಚ್ಚಳವಾದ ಹಿನ್ನಲೆ ತನ್ನ ಉತ್ಪದಾನೆಯ ಮಟ್ಟವನ್ನು ವಿಸ್ತರಿಸಿದ್ದು, ಎಂಜಿ ಹೆಕ್ಟರ್ ಉತ್ಪಾದನೆಯಲ್ಲಿ 10,000ದ ಗಡಿ ದಾಟಿದೆ ಎಂಬ ಮಾಹಿತಿ ಗುಜರಾತ್‌ನ ಬರೋಡಾದಲ್ಲಿರುವ ಕಂಪನಿಯ ಸ್ಥಾವರದಿಂದ ಸೋರಿಕೆಯಾಗಿದೆ.
Related Articles
Advertisement
ಈ ತಿಂಗಳಿನಲ್ಲಿ ಬುಕ್ಕಿಂಗ್ ಪ್ರಕ್ರಿಯೆಯಲ್ಲೂ ಹೆಚ್ಚಳ ಕಂಡು ಬಂದಿದ್ದು, 40,000 ಕಾರು ಬುಕ್ ಆಗಿವೆ. ಈ ಹಿನ್ನಲೆ 6,000 ಕ್ಕೂ ಹೆಚ್ಚು ಯುನಿಟ್‌ಗಳನ್ನು ವಿತರಿಸಲಾಗಿದೆ. ಜತೆಗೆ ಈ ತಿಂಗಳ ಕೊನೆಯಲ್ಲಿ 3,000 ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗುವ ನಿರೀಕ್ಷೆಯಿದೆ ಎಂದು ಕಂಪನಿ ತಿಳಿಸಿದೆ.
ಕಾರಿನ ವಿಶೇಷತೆಗಳುಎಂಜಿ ಹೆಕ್ಟರ್ ಕಾರು ಆವೃತ್ತಿಯಲ್ಲಿ 1.5 ಲೀಟರ್‌ನ ಪೆಟ್ರೋಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದೆ. ಜತೆಗೆ 143ಬಿಹೆಚ್‌ಪಿ ಪವರ್ ಮತ್ತು 250ಎನ್‌ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಡೀಸೆಲ್ ಮಾದರಿಯಲ್ಲಿ 2.0 ಲೀಟರ್ ಟಬೋಜಾಜx…ì ಎಂಜಿನ್ ಜತೆಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮೂಲಕ 170ಬಿಹೆಚ್‌ಪಿ ಪವರ್ ಮತ್ತು 350 ಎನ್‌ಎಂ ಟಾರ್ಕ್ ಉತ್ಪಾದಿಸುವ ಗುಣ ಹೊಂದಿದೆ.