ಮುಂಬೈ: ಪ್ರಸಿದ್ಧ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆ ಶುಕ್ರವಾರ (ಜನವರಿ 08, 2021) ಆರು ಆಸನಗಳುಳ್ಳ ನೂತನ ಎಂಜಿ ಹೆಕ್ಟರ್ ಪ್ಲಸ್ ಎಸ್ ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಲವು ಆಕರ್ಷಕ ಫೀಚರ್ಸ್ ನೊಂದಿಗೆ ಎಂಜಿ ಹೆಕ್ಟರ್ ಪ್ಲಸ್ 2021 ಬಿಡುಗಡೆಯಾಗಿದ್ದು, ವಾಹನ ಬುಕ್ಕಿಂಗ್ ಆರಂಭಗೊಂಡಿರುವುದಾಗಿ ತಿಳಿಸಿದೆ.
ನೂತನ ಎಂಜಿ ಹೆಕ್ಟರ್ ಪ್ಲಸ್ ಎಸ್ ಯುವಿ ಬೆಲೆ 12.90 ಲಕ್ಷ ಎಂದು ಕಂಪನಿ ತಿಳಿಸಿದೆ. ಸುಮಾರು 18 ತಿಂಗಳ ನಂತರ ಎಂಜಿ ಮೋಟಾರ್ ಕಂಪನಿ ಮಧ್ಯಮ ಗಾತ್ರದ ಎಸ್ ಯುವಿ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ ನಂತರ ಇದೀಗ ನೂತನ ಮಾದರಿಯ ಎಸ್ ಯುವಿಯನ್ನು ಬಿಡುಗಡೆ ಮಾಡಿದೆ.
ಎಂಜಿ ಹೆಕ್ಟರ್ ಪ್ಲಸ್ ಆರು ಮತ್ತು ಏಳು ಆಸನಗಳನ್ನು ಒಳಗೊಂಡಿದ್ದು, 12.90ಲಕ್ಷ ಹಾಗು 13.35 ಲಕ್ಷ ರೂಪಾಯಿ ಬೆಲೆ ಇರುವುದಾಗಿ ತಿಳಿಸಿದೆ. ಚೀನಾ ಒಡೆತನದ ಬ್ರಿಟಿಷ್ ಕಾರು ತಯಾರಿಕಾ ಕಂಪನಿ ಈಗಾಗಲೇ 40 ಸಾವಿರ ಎಂಜಿ ಹೆಕ್ಟರ್ ಅನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ಇದೀಗ ಬೃಹತ್ ಗಾತ್ರದ ಎಂಜಿ ಹೆಕ್ಟರ್ ಪ್ಲಸ್ ಎಸ್ ಯುವಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಹೊಸ ವಿನ್ಯಾಸವನ್ನೊಳಗೊಂಡಿರುವುದಾಗಿ ಹೇಳಿದೆ.
ಐಶಾರಾಮಿ ಷಾಂಪೇನ್ ಮತ್ತು ಬ್ಲ್ಯಾಕ್ ಡ್ಯುಯಲ್ ಟೋನ್ ಒಳಾಂಗಣ ಹೊಂದಿದೆ. 18 ಇಂಚಿನ ಸ್ಟೈಲಿಶ್ ಡ್ಯುಯಲ್ ಟೋನ್ ಮಿಶ್ರಲೋಹಗಳು, ಧ್ವನಿ ಆಜ್ಞೆಗಳನ್ನು ನವೀಕರಿಸಿದ ಐ ಸ್ಮಾರ್ಟ್ ವೈಶಿಷ್ಟ್ಯ ಹೊಂದಿದೆ.
ಕ್ಯಾಪ್ಟನ್ ಆಸನಗಳನ್ನು ಹೊಂದಿರುವ ಹೆಕ್ಟರ್ ಪ್ಲಸ್ 18 ಇಂಚಿನ ಸ್ಟೈಲಿಶ್ ಡ್ಯುಯಲ್ ಟೋನ್ ಮಿಶ್ರಲೋಹಗಳು, ಫ್ರಂಟ್ ವೆಂಟೆಲೇಟೆಡ್ ಆಸನಗಳು, ವೈರ್ ಲೆಸ್ ಚಾರ್ಜಿಂಗ್ ಮತ್ತು ಆಟೋ ಡಿಮ್ಮಿಂಗ್ ಐಆರ್ ವಿಎಂ ವೈಶಿಷ್ಟ್ಯತೆ ಹೊಂದಿರುವುದಾಗಿ ತಿಳಿಸಿದೆ.