Advertisement
ಪೇದೆ ಪ್ರತಿನಿತ್ಯ ಕರ್ತವ್ಯವನ್ನು ಮುಗಿಸಿ ತನ್ನ ಹೆಂಡತಿಯ ಮನೆಯಾದ ವಡ್ಡರ್ಸೆ ಯಾಳಕ್ಲುವಿನಲ್ಲಿ ವಾಸವಿರುತ್ತಿದ್ದರು. ಹೀಗಾಗಿ ಸೋಂಕು ದೃಢಗೊಳ್ಳುತ್ತಿದ್ದಂತೆ ಜಿಲ್ಲಾಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಕುಂದಾಪುರದ ಸಹಾಯಕ ಆಯುಕ್ತ ಕೆ.ರಾಜು, ಉಡುಪಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್, ಡಿವೈಎಸ್‌ಪಿ ಜೈ ಶಂಕರ್, ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷೆ ಹೇಮಾ, ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ, ಡಿಹೆಚ್‌ಓ ಸುಧೀಂದ್ರ ಚಂದ್ರ ಸೂಡ, ಕೋಟ ಠಾಣಾಧಿಕಾರಿ ನಿತ್ಯಾನಂದ ಗೌಡ ಮತ್ತು ಕಂದಾಯ ಇಲಾಖೆಯ ಸಿಬಂದಿಗಳು, ಪಂಚಾಯತ್ ಸದಸ್ಯರು ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ಮನೆಯ ಸುತ್ತಮುತ್ತ ಪ್ರದೇಶವನ್ನು ಪರಿಶೀಲಿಸಿದರು ಹಾಗೂ ಮನೆಯಿಂದ 50ಮೀ ದೂರವನ್ನು ಕಂಟೈನ್ಮೆಂಟ್ ಝೋನ್ ಮತ್ತು 50 ಮೀ ನಿಂದ 1 .ಕಿಮೀ ಪ್ರದೇಶವನ್ನು ಬಪರ್ ಝೋನ್ ಎನ್ನುವುದಾಗಿ ಘೋಷಿಸಿ ಸಂಚಾರ ನಿಷೆೇಧಕ್ಕೆ ಸೂಚಿಸಿದರು. ಸೊಂಕಿತರೊಂದಿಗೆ ಸಂಪರ್ಕ ಹೊಂದಿದವರನ್ನು ಹೋಮ್ ಕ್ವಾರೆಂಟೆ„ನ್‌ಗೆ ಸೂಚಿಸಲಾಯಿತು.
ಕೋಟ-ಗೋಳಿಯಂಗಡಿ ಜಿಲ್ಲಾ ಮುಖ್ಯರಸ್ತೆಯಿಂದ ಎಂ.ಜಿ.ಕಾಲನಿ ಸೇರುವ ಎರಡು ರಸ್ತೆ ಹಾಗೂ ಯಾಳಕ್ಲು ಬೇಳೂರು ಸಂಪರ್ಕಿಸುವ ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಸೀಲ್ ಡೌನ್ ಮಾಡಲಾಗಿದ್ದು 1 ಕಿ.ಮೀ ಸುತ್ತಲಿನ ನಿವಾಸಿಗಳಿಗೆ ಊರಿನಿಂದ ಹೊರ ಹೋಗುವುದು ಹಾಗೂ ಒಳ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಗ್ರಾ.ಪಂ.ನಿಂದ ನಿಯೋಜಿತಗೊಂಡ ಪ್ರತಿನಿಧಿಗಳು ಅಗತ್ಯ ಸಾಮಾಗ್ರಿಗಳನ್ನು ಪೂರೈಸಲಿದ್ದಾರೆ. ಸಂಪರ್ಕಿತರು ಮುಂಜಾಗೃತೆಗೆ ಸೂಚನೆ
ಸೊಂಕಿತರು ಸಾಸ್ತಾನ ಟೋಲ್ ಪ್ಲಾಝಾದಲ್ಲಿನ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದು ಹಾಗೂ ಹಲವು ಕಡೆಗಳಿಗೆ ಭೇಟಿ ನೀಡಿದ್ದಾರೆ. ಹೀಗಾಗಿ ಠಾಣೆಯಲ್ಲಿನ ಸಹೊದ್ಯೋಗಿ ಸಿಬಂದಿಗಳನ್ನು, ಚೆಕ್‌ಪೋಸ್ಟ್‌ನಲ್ಲಿ ಇವರ ಸಂಪರ್ಕಕ್ಕೆ ವ್ಯಕ್ತಿಗಳನ್ನು ಮತ್ತು ಸಂಚಾರದ ಸಂದರ್ಭ ಸಂಪರ್ಕ ಹೊಂದಿದವರಲ್ಲಿ ಮುಂಜಾಗೃತೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.