ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಫೈರ್ ಸೇಫ್ಟಿ ಎಂಜಿನಿಯರಿಂಗ್ ಸಂಸ್ಥೆಯು ರಾಷ್ಟ್ರೀಯ ಸುರಕ್ಷತಾ ದಿನವನ್ನು ಮಂಗಳವಾರ ಸಂಸ್ಥೆಯ ನೂತನ ಕ್ಯಾಂಪಸ್ ಅಡ್ಯಾರ್‌ನಲ್ಲಿ ವಿದ್ಯಾರ್ಥಿಗಳು ಮತ್ತು ವಿವಿಧ ಕಂಪೆನಿಗಳ ಸಹಯೋಗದೊಂದಿಗೆ ಆಚರಿಸಿತು.
ಎಂಐಎಫ್‌ಎಸ್‌ಇ ಸಂಸ್ಥೆಯ ಆಡಳಿತ ನಿರ್ದೇಶಕ ವಿನೋದ್ ಜಾನ್ ಮಾತನಾಡಿ, ಸುರಕ್ಷತೆ ಎಂಬುದು ಕೇವಲ ಉದ್ಯಮ ಮತ್ತು ಕಾರ್ಮಿಕರಿಗೆ ಸೀಮಿತವಾಗಿಲ್ಲ. ಪ್ರತಿಯೊಬ್ಬರೂ ಹೇಗೆ ಸುರಕ್ಷಿತವಾಗಿ ಬದುಕಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸು ವುದೇ ಈ ಆಚರಣೆಯ ಉದ್ದೇಶ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ಅಗ್ನಿಶಾಮಕ ದಳದ ಪ್ರಾಂತೀಯ ಅಗ್ನಿಶಮನ ಅಧಿಕಾರಿ ಜಿ. ತಿಪ್ಪೇಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸುರಕ್ಷತೆ ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ ಎಂದರು.
ಬಳಿಕ ವಿಶೇಷ ಸುರಕ್ಷತಾ ಜಾಥಾಕ್ಕೆ ಚಾಲನೆ ನೀಡಲಾಯಿತು. ಸುಮಾರು 200ರಷ್ಟು ವಿದ್ಯಾರ್ಥಿಗಳು, ಸಂಸ್ಥೆಯ ಸಿಬಂದಿ ಮತ್ತು ಸಾರ್ವಜನಿಕರು ಪಾಲ್ಗೊಂಡ ಜಾಥಾ ಅಡ್ಯಾರ್ ಕ್ಯಾಂಪಸ್‌ನಿಂದ ಅಡ್ಯಾರ್‌ಕಟ್ಟೆ ಮೂಲಕ ಸುಮಾರು 6 ಕಿ.ಮೀ. ಸಾಗಿ ಮತ್ತೆ ಅಡ್ಯಾರ್ ಎಂಐಎಫ್‌ಎಸ್‌ಇ ಕ್ಯಾಂಪಸ್‌ನಲ್ಲಿ ಕೊನೆಗೊಂಡಿತು.
ಸಂಸ್ಥೆಯ ಪ್ರಾಂಶುಪಾಲ ಯಶವಂತ್ ಗೋಪಾಲ್ ಶೆಟ್ಟಿ ಮತ್ತು ಅಡ್ಮಿನಿಸ್ಟ್ರೇಟರ್ ಸನತ್ ಕೆ.ಬಿ. ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಿಬಂದಿಗಳಾದ ಮಕೂºಲ್ ಶರೀಫ್, ಓಬಯ್ಯ, ವೆನಿಲ್ಡಾ, ರಾಹಿಲಾ, ದೀಪ್ತಿ, ರಾಜೇಶ್, ನಿಶೆಲ್, ಪ್ರಮೀಳಾ, ನವ್ಯಾ, ಚಂದ್ರಾವತಿ ಭಾಗವಹಿಸಿ ಜಾಗೃತಿ ಮೂಡಿಸಿದರು.