Advertisement

‘ಮಿಸ್ ಯೂನಿವರ್ಸ್ 2021’ ಕಿರೀಟಕ್ಕೆ ಮುತ್ತಿಕ್ಕಿದ ಮೆಕ್ಸಿಕೊ ಸುಂದರಿ

12:32 PM May 17, 2021 | Team Udayavani |

2021ನೇ ಸಾಲಿನ ಮಿಸ್ ಯೂನಿವರ್ಸ್ ಕಿರೀಟಕ್ಕೆ ಮೆಕ್ಸಿಕೊದ ಬ್ಯೂಟಿ ಆಂಡ್ರಿಯಾ ಮೆಜಾ ಮುತ್ತಿಕ್ಕಿದ್ದಾರೆ.

Advertisement

ಅಮೆರಿಕದ ಫ್ಲೋರಿಡಾದಲ್ಲಿ ನಡೆದ 69ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಆಂಡ್ರಿಯಾ ಮಿಸ್ ಯೂನಿವರ್ಸ್ ಪಟ್ಟ ತನ್ನದಾಗಿಸಿಕೊಂಡಿದ್ದಾರೆ.

ವಿಶ್ವದಾದ್ಯಂತ ಬಂದಿದ್ದ 73 ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ಆಂಡ್ರಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 2020ರ ಮಿಸ್ ಯೂನಿವರ್ಸ್ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ ಕಿರೀಟ ಧಾರಣೆ ಮಾಡಿದರು.

ಆಂಡ್ರಿಯಾಗೆ ಭಾರತದ ಮಂಗಳೂರು ಮೂಲದ ಸುಂದರಿ ಆಡ್ಲೈನ್ ಕ್ಯಾಸ್ಟೆಲಿನೊ ಕೂಡ ಪ್ರಬಲ ಸ್ಪರ್ಧಿಯಾಗಿಯಾಗಿದ್ದರು. ಟಾಪ್ 5 ನಲ್ಲಿ ಭಾರತದ ಸ್ಪರ್ಧಿ ಆಡ್ಲೈನ್ ಕ್ಯಾಸ್ಟೆಲಿನೊ ಕೂಡ ಸ್ಥಾನ

ಇನ್ನು ಆಂಡ್ರಿಯಾ ಮೆಜಾ ಲಿಂಗ ಸಮಾನತೆ ಬಗ್ಗೆ ಧ್ವನಿ ಎತ್ತಿದ್ದು ಸಾಕಷ್ಟು ಹೋರಾಟ ಮಾಡಿದ್ದಾರೆ. 26 ವರ್ಷದ ಆಂಡ್ರಿಯಾ ಚಿಹೋವಾ ನಗದಲ್ಲಿ ಜನಿಸಿದರು. ಚಿಹೋವಾ ಆಟಾನಮಸ್ ವಿಶ್ವವಿದ್ಯಾಲಯದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಪದವಿ ಪಡೆದರು. ಮಿಸ್ ಯೂನಿವರ್ಸ್ ಆಗಿ ಗೆದ್ದು ಬೀಗಿರುವ ಆಂಡ್ರಿಯಾಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

Advertisement

 

Mexico, Andrea Meza ,Crowned ,Miss Universe 2021, ಆಂಡ್ರಿಯಾ ಮಿಸ್, ಮಿಸ್ ಯೂನಿವರ್ಸ್ 2021,

 

 

 

 

Advertisement

Udayavani is now on Telegram. Click here to join our channel and stay updated with the latest news.

Next