ಮೆಕ್ಸಿಕೋ ಸಿಟಿ: ಕೋವಿಡ್ ವಿಚಾರದಲ್ಲಿ ಸೋಂಕಿತನೊಂದಿಗೆ ಸಂಪರ್ಕ ಹೊಂದಿದ್ದರೆ ಎಲ್ಲರೂ ಒಂದು ಬಾರಿ ಶಾಕ್‌ಗೆ ಒಳಗಾಗುತ್ತಾರೆ. ಅಷ್ಟೇ ಅಲ್ಲ ಕೂಡಲೇ ಪರೀಕ್ಷೆ ನಡೆಸಬೇಕೆಂದು ಸಾಕಷ್ಟು ಪ್ರಯತ್ನ ಮಾಡಬಹುದು. ಆದರೆ ಮೆಕ್ಸಿಕೋ ಅಧ್ಯಕ್ಷ ಆ್ಯಂಡ್ರೆಸ್ ಮಾನ್ಯುಯೆಲ್ ಲೋಪೆಜ್ ಒಬ್ರಾಡರ್ ಅವರು ಈಗ ಕೋವಿಡ್ ಪರೀಕ್ಷೆ ಮಾಡಿಸಲು ಬಿಲ್ ಕುಲ್ ಒಪ್ಪಿಲ್ಲ. ತಮ್ಮ ಆಡಳಿತದ ಅತ್ಯುನ್ನತ ಸದಸ್ಯರೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದ್ದರೂ ಟೆಸ್ಟ್ ಮಾಡಿಸಲ್ಲ ಎಂದು ಕೂತಿದ್ದಾರಂತೆ.
ಮೆಕ್ಸಿಕೋದ ಸಾಮಾಜಿಕ ಸುರಕ್ಷಾ ವ್ಯವಸ್ಥೆಯ ಮುಖ್ಯಸ್ಥರಾದ ಝೋಯೆ ರೋಬ್ಲೆಡೊ ಅವರು ರವಿವಾರ ತಮಗೆ ಕೋವಿಡ್ ಸೋಂಕು ಬಂದಿದೆ ಎಂದು ಘೋಷಿಸಿಕೊಂಡಿದ್ದರು. ಅದಕ್ಕೂ ಎರಡು ದಿನಗಳ ಹಿಂದೆ ಅವರು ಅಧ್ಯಕ್ಷರೊಂದಿಗೆ ಸಭೆಯೊಂದರಲ್ಲಿ ಪಾಲ್ಗೊಂಡಿದ್ದರು. ಈಗ ಸಭೆಯಲ್ಲಿದ್ದ ಇತರರೆಲ್ಲರೂ ಪರೀಕ್ಷೆಗೆ ಒಳಗಾಗಿದ್ದು ಸ್ವಯಂ ಕ್ವಾರಂ ಟೈನ್‌ನಲ್ಲಿದ್ದಾರೆ. ಆದರೆ ಅಧ್ಯಕ್ಷರು ತಾನು ಏನೂ ಮಾಡಲ್ಲ ಎಂದಿದ್ದಾರೆ.
ಆದರೆ ಸುರಕ್ಷತೆ ದೃಷ್ಟಿಯಿಂದ ಈಗಲೂ ಮೊತ್ತು ಈ ಮೊದಲೂ ಇತರರಿಂದ ದೂರವಿದ್ದು ಅಂತರ ಕಾಯ್ದುಕೊಂಡಿದ್ದೇನೆ. ಆದ್ದರಿಂದ ಪರೀಕ್ಷೆಗೆ ಒಳಪಡುವುದಿಲ್ಲ ಎನ್ನುವುದು ಅವರ ಸಮಜಾಯಿಷಿ.
ಇನ್ನು ಲೋಪೆಝ್ ಅವರು ಆಗ್ನೇಯ ಮೆಕ್ಸಿಕೋದಲ್ಲಿ ಒಂದು ವಾರ ಪ್ರವಾಸ ಮುಗಿಸಿ ರಾಜಧಾನಿಗೆ ಮರಳಿದ್ದು, ಕೋವಿಡ್ ಇರುವ ಸಂದರ್ಭದಲ್ಲಿ ಇಂತಹ ಪ್ರವಾಸ ಬೇಕಿತ್ತೇ ಎಂದು ಟೀಕೆಗಳೂ ವ್ಯಕ್ತವಾಗಿವೆ. ಇದೇ ವೇಳೆ ಸಂಪರ್ಕಿತರ ಸಂಪರ್ಕ ಹೊಂದಿದ್ದರಿಂದ ಅವರು ಜು.1ರಂದು ಅಮೆರಿಕದ ಶ್ವೇತಭವನದನಲ್ಲಿ ನಡೆಯಲಿರುವ ಮುಕ್ತ ವ್ಯಾಪಾರ ಕುರಿತ ಸಭೆಯಲ್ಲಿ ಭಾಗಿಯಾಗುವುದೂ ಅನುಮಾನವಾಗಿದೆ ಎಂದು ಹೇಳಲಾಗಿದೆ.