Advertisement
ಫೈನಲ್‌ನಲ್ಲಿ ಅವರು ಯಾವುದೇ ಶ್ರೇಯಾಂಕ ಹೊಂದಿಲ್ಲದ ಅಮೆರಿಕದ ಟೇಲರ್ ಫ್ರಿಟ್ಜ್ ವಿರುದ್ಧ 6-3, 6-2 ನೇರ ಸೆಟ್‌ಗಳ ಜಯ ಸಾಧಿಸಿದರು.ಇದು ಈ ವರ್ಷ ನಡಾಲ್ ಗೆದ್ದ ಮೊದಲ ಪ್ರಶಸ್ತಿ. ಹಾಗೆಯೇ 3ನೇ ಮೆಕ್ಸಿಕೊ ಕಿರೀಟವೂ ಹೌದು. ಇದಕ್ಕೂ ಮೊದಲು 2005 ಮತ್ತು 2013ರಲ್ಲಿ ನಡಾಲ್ ಇಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು. ಒಟ್ಟಾರೆಯಾಗಿ ಟೆನಿಸ್ ಬಾಳ್ವೆಯಲ್ಲಿ ನಡಾಲ್‌ಗೆ ಒಲಿದ 85ನೇ ಪ್ರಶಸ್ತಿ ಇದಾಗಿದೆ.
ಈ ಕೂಟದ ವನಿತಾ ಸಿಂಗಲ್ಸ್ ಪ್ರಶಸ್ತಿ ಅಮೆರಿಕದ ಹೀತರ್ ವಾಟ್ಸನ್ ಪಾಲಾಯಿತು. ತೀವ್ರ ಪೈಪೋಟಿಯ ಫೈನಲ್‌ನಲ್ಲಿ ಅವರು ಕೆನಡಾದ ಯುವ ಆಟಗಾರ್ತಿ ಲೇಯಾÉ ಫೆರ್ನಾಂಡಿಸ್ ವಿರುದ್ಧ 6-4, 6-7 (6-8), 6-1 ಅಂತರದ ಜಯ ಸಾಧಿಸಿದರು. ಇವರಿಬ್ಬರ ಹೋರಾಟ 2 ಗಂಟೆ, 46 ನಿಮಿಷಗಳ ತನಕ ಸಾಗಿತು.
Related Articles
Advertisement