ಬೆಂಗಳೂರು: “ನಮ್ಮ ಮೆಟ್ರೋ’ ಪ್ರಯಾಣಿಕರು ಈಗ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡಷ್ಟೇ ಅವಧಿಯಲ್ಲಿ ಮೆಟ್ರೋ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದು. ಮೆಟ್ರೋಪ್ರಯಾಣಕ್ಕಾಗಿಟಾಪ್‌ಅಪ್‌ಕಾರ್ಡ್ ರೀಚಾರ್ಜ್‌ಗೆ ಮತ್ತು ಹೀಗೆ ರೀಚಾರ್ಜ್ ಮಾಡಿದ ಮೊತ್ತ ಜಮೆ ಆಗಲು ಗಂಟೆಗಟ್ಟಲೆ ಕಾಯಬೇಕಿಲ್ಲ.
ಈ ಆನ್‌ಲೈನ್ ಸೇವೆ ಇನ್ಮುಂದೆ ನಿಲ್ದಾಣಗಳಲ್ಲೇ ಲಭ್ಯವಾಗಲಿದೆ. ಪ್ರತಿ ಮೆಟ್ರೋ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ಜತೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಕಾರ್ಡ್ ಟಾಪ್‌ಅಪ್ ಟರ್ಮಿನಲ್ (ಸಿಟಿಟಿ) ಎಂಬ ಆನ್‌ಲೈನ್ ರೀಚಾರ್ಜ್ ಸೇವೆಯನ್ನು ಆರಂಭಿಸಿದೆ.
ಈ ಯಂತ್ರದಲ್ಲೇ ಪ್ರಯಾಣಿಕರು ಮೆಟ್ರೋ ಮೊಬೈಲ್ ಆ್ಯಪ್, ನಿಗಮದ ವೆಬ್‌ಸೈಟ್, ಫೋನ್‌ಪೇಅಥವಾ ಪೇಟಿಯಂ ಇದರಲ್ಲಿ ಯಾವುದಾದರೂ ಮಾದರಿಯಿಂದ ಕಾರ್ಡ್ ರೀಚಾರ್ಜ್ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚು ಸಮಯವೂ ಹಿಡಿಯುವುದಿಲ್ಲ. ಜತೆಗೆ ಕೆಲವೇ ಕ್ಷಣಗಳಲ್ಲಿ ಕಾರ್ಡ್‌ಗೆ ಹಣಕೂಡ ಜಮೆ ಆಗುತ್ತದೆ.
ಇದಕ್ಕಾಗಿ ಪ್ರಯಾಣಿಕರು ಮಾಡಬೇಕಾದ್ದಿಷ್ಟೇ- ಸಿಟಿಟಿ ಮುಂದೆನಿಂತು, ಯಾವ ಮಾದರಿಯಲ್ಲಿ ರೀಚಾರ್ಜ್ ಮಾಡಲಿದ್ದೀರಿ ಎಂಬುದನ್ನು ನಿಗದಿತ ಮೊತ್ತದೊಂದಿಗೆ ನಮೂದಿಸಬೇಕು. ನಂತರ ನಿಮ್ಮ ಪ್ರಯಾಣದ ಕಾರ್ಡ್ ಅನ್ನು ಸಿಟಿಟಿ ಯಂತ್ರದಲ್ಲಿ ಪ್ರಸ್ತುತಪಡಿಸಬೇಕು. “ಕ್ಲೇಮ್ ಆನ್‌ಲೈನ್ ಟಾಪ್ ಅಪ್’ ಗುಂಡಿಯನ್ನು ಒದಗಿಸಬೇಕು.
“ಹೌದು’ ಎಂದು ದೃಢೀಕರಿಸಿದ ನಂತರ ರೀಚಾರ್ಜ್ ಮಾಡಿದ ಮೊತ್ತವನ್ನು ಕಾರ್ಡ್‌ಗೆ ಜಮೆ ಆಗುತ್ತದೆ ಹಾಗೂ ಕಾರ್ಡ್‌ನಲ್ಲಿರುವ ಬಾಕಿ ಮೊತ್ತವನ್ನು ನವೀಕರಿಸಲಾಗುತ್ತದೆ. ಪ್ರಯಾಣಿಕರು ತಮ್ಮ ಟ್ರಾವೆಲ್ ಕಾರ್ಡ್‌ನಲ್ಲಿರುವ ಮೊತ್ತವನ್ನು ತಿಳಿಯಲೂ ಈ ಸಿಟಿಟಿ ಬಳಸಬಹುದು. ಆದರೆ, ಹೀಗೆ ರೀಚಾರ್ಜ್ ಮಾಡಿಸಿದ ಕಾರ್ಡ್ ಅನ್ನು ಆರು ತಿಂಗಳಲ್ಲಿ ಒಮ್ಮೆಯಾದರೂ ಬಳಕೆ ಮಾಡುವ ನಿಯಮ ಇದಕ್ಕೂ ಅನ್ವಯ ಆಗಲಿದೆ.
6 ಸಾವಿರ ವಹಿವಾಟು; 10 ಲಕ್ಷ ರೂ. ಸಂಗ್ರಹ
ಅಂದಹಾಗೆ ನಿತ್ಯ “ನಮ್ಮ ಮೆಟ್ರೋ’ದಲ್ಲಿ ಸುಮಾರು ಆರು ಸಾವಿರ ಆನ್‌ಲೈನ್ ರೀಚಾರ್ಜ್ ಮಾಡಲಾಗುತ್ತಿದ್ದು, ಇದರ ಮೊತ್ತ ಅಂದಾಜು8-10 ಲಕ್ಷ ರೂ. ಆಗಿದೆ. ಆದರೆ, ಈಗಿರುವ ವ್ಯವಸ್ಥೆಯಲ್ಲಿ ರೀಚಾರ್ಜ್ ಮಾಡಿಸಿದ ತಕ್ಷಣ ಆ ಹಣವುಕಾರ್ಡ್‌ಗೆ ಜಮೆ ಆಗುವುದಿಲ್ಲ.ಕೆಲ ಸಲ ದಿನಗಟ್ಟಲೆ ಕಾಯಬೇಕು ಎಂಬ ಆರೋಪ ಕೇಳಿಬರುತ್ತಿತ್ತು. ಇನ್ನು ನಿಲ್ದಾಣಗಳಕೌಂಟರ್ ಗಳಲ್ಲಿ ಚಿಲ್ಲರೆ ಸಮಸ್ಯೆ ಆಗುತ್ತಿತ್ತು. ಜತೆಗೆ ಕೋವಿಡ್ ಹಿನ್ನೆಲೆಯಲ್ಲಿ ಈ ಯಂತ್ರವು ಮತ್ತಷ್ಟು ಸುರಕ್ಷಿತ ಸೇವೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.