Advertisement

ದಿಲ್ಲಿ ಮೆಟ್ರೋ ರೈಲು ಸೇವೆಯಲ್ಲಿ 90 ನಿಮಿಷಗಳ ಕಾಲ ಅಡಚಣೆ

12:15 PM May 04, 2018 | udayavani editorial |

ಹೊಸದಿಲ್ಲಿ : ಓವರ್‌ಹೆಡ್‌ ಇಲೆಕ್ಟ್ರಿಫಿಕೇಶನ್‌ ನಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ದಿಲ್ಲಿ ಮೆಟ್ರೋ ರೈಲು ಸೇವೆಯ ವಯಲೆಟ್‌ ಲೈನಿನಲ್ಲಿ ಇಂದು ಬೆಳಗ್ಗೆ ಸುಮಾರು 90 ನಿಮಿಷಗಳ ಕಾಲ ಕಾಶ್ಮೀರಿ ಗೇಟ್‌ ಮತ್ತು ಸೆಂಟ್ರಲ್‌ ಸೆಕ್ರೆಟರಿಯೇಟ್‌ ಸ್ಟೇಶನ್‌ ನಡುವಿನ ಓಡಾಟ ಬಾಧಿತವಾಯಿತು. 

Advertisement

ಸೆಂಟ್ರಲ್‌ ಸೆಕ್ರಟರಿಯೇಟ್‌ ಮತ್ತು ಮಂಡಿ ಹೌಸ್‌ (ಕಾಶ್ಮೀರಿ ಗೇಟ್‌ಗೆ ಹೋಗುವ ಮಾರ್ಗ) ನಡುವೆ ಒಎಚ್‌ಇ ಟ್ರಿಪ್ಪಿಂಗ್‌ ನಡೆದಿದ್ದ ಕಾರಣ ಮೆಟ್ರೋ ರೈಲು ಸೇವೆಯಲ್ಲಿ 90 ನಿಮಿಷಗಳ ಕಾಲ ಅಡಚಣೆ ಉಂಟಾಯಿತು ಎಂದು ದಿಲ್ಲಿ ಮೆಟ್ರೋ ಕಾರ್ಪೊರೇಶನ್‌ (ಡಿಎಂಆರ್‌ಸಿ) ಪ್ರಕಟನೆಯಲ್ಲಿ ತಿಳಿಸಿದೆ. 

ರೈಲೈ ಸೇವೆಯಲ್ಲಿನ ಅಡಚಣೆಯು ಬೆಳಗ್ಗೆ 8.34ರಿಂದ 10.02ರ ವರೆಗೆ ಉಂಟಾಯಿತೆಂದು ಡಿಎಂಆರ್‌ಸಿ ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next