ಬೆಂಗಳೂರು: ಬಿಡದಿ ಹಾಫ್ ಮ್ಯಾರ ಥಾನ್ ಮತ್ತು ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ “ನಮ್ಮ ಮೆಟ್ರೋ’ ಸೇವೆ ವಿಸ್ತರಿಸಲಾಗಿದೆ.
ಬರುವ ಭಾನುವಾರ (ಮಾರ್ಚ್ 24) ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಬಿಡದಿ ಹಾಫ್ ಮ್ಯಾರಥಾನ್ ನಡೆಯ ಲಿದೆ. ಅದರಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಅಂದು ಬೆಳಗಿನ ಜಾವ 4.30ರಿಂದ ನಾಲ್ಕೂ ಟರ್ಮಿನಲ್‌ಗಳಿಂದ ಏಕಕಾಲದಲ್ಲಿ ಮೆಟ್ರೋ ಸೇವೆ ಆರಂಭಿಸಲಾಗುವುದು. ಸಾಮಾನ್ಯವಾಗಿ ಭಾನುವಾರ ಬೆಳಗ್ಗೆ 7 ಗಂಟೆಗೆ ಮೆಟ್ರೋ ಸೇವೆ ಆರಂಭವಾಗುತ್ತದೆ.
ಅದೇ ರೀತಿ, ನಗರದಲ್ಲಿ ಮಾರ್ಚ್ 25, 29 ಮತ್ತು ಏ.2ರಂದು ಐಪಿಎಲ್ ಟಿ-20 ಪಂದ್ಯಗಳು ನಡೆಯಲಿದ್ದು, ವೀಕ್ಷಣೆಗೆ ಆಗಮಿಸುವವರಿಗಾಗಿ ರೈಲು ಸೇವೆ ವಿಸ್ತರಿಸಲಾಗಿದ್ದು, ಎಲ್ಲ ನಾಲ್ಕೂ ಟರ್ಮಿನಲ್‌ಗಳಿಂದ ಆಯಾ ದಿನಗಳಂದು ಕೊನೆಯ ರೈಲುಗಳು ರಾತ್ರಿ 11.30ಕ್ಕೆ ನಿರ್ಗಮಿಸಲಿವೆ.
ಪಂದ್ಯಾವಳಿ ನಡೆಯುವ ದಿನಗಳಲ್ಲಿ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ 50 ರೂ. ಮುಖ ಬೆಲೆಯ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ಮಾರಾಟಕ್ಕೆ ಲಭ್ಯ ಇರ ಲಿವೆ. ಇದರಿಂದ ಕಬ್ಬನ್ ಉದ್ಯಾನ ಮತ್ತು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ ಗಳಿಂದ ಉಳಿದ ಯಾವುದೇ ನಿಲ್ದಾಣಕ್ಕೆ ಒಂದು ಬಾರಿಗೆ ಪ್ರಯಾಣಿಸಬಹುದಾ ಗಿದೆ. ವಿತರಣೆಯ ದಿನದಂದು ರಾತ್ರಿ 8ರಿಂದ ಆ ದಿನದ ಸೇವೆಗಳು ಕೊನೆ ಗೊಳ್ಳುವವರೆಗೆ ಪೇಪರ್ ಟಿಕೆಟ್‌ಗಳು ಮಾನ್ಯವಾಗಿರುತ್ತವೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯ ಇರುವುದಿಲ್ಲ.
ಇನ್ನು ಎಂದಿನಂತೆ ಕ್ಯುಆರ್ ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್ ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನು ಬಳಸಬ ಹುದು. ವಾಟ್ಸ್‌ಆ್ಯಪ್/ ನಮ್ಮ ಮೆಟ್ರೋ ಆ್ಯಪ್/ ಪೇಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಟಿಕೆಟ್‌ಗಳನ್ನು ಖರೀದಿಸಬಹುದು.