ಬೆಂಗಳೂರು: “ಮೆಟ್ರೋ ಆವರಣ; ಹಾರ್ನ್ ಮಾಡಬೇಡಿ’ – “ನಮ್ಮ ಮೆಟ್ರೋ’ ಟ್ರಿನಿಟಿ ನಿಲ್ದಾಣದ ಹೊರಭಾಗದಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು ಇಂತಹದ್ದೊಂದು ಮನವಿ ಮಾಡಿದೆ.
ನಗರದಲ್ಲಿ ವಿಶೇಷವಾಗಿ ಮೆಟ್ರೋ ಎತ್ತರಿಸಿದ ಮಾರ್ಗಗಳ ನಿಲ್ದಾಣಗಳ ಆವರಣದಲ್ಲಿ ಹಾರ್ನ್ ಮಾಡುವುದರಿಂದ ವಾಹನ ಸವಾರರು, ಸುತ್ತಲಿನ ಮಳಿಗೆಗಳಲ್ಲಿರುವ ವ್ಯಾಪಾರಿಗಳು, ಪಾದಚಾರಿಗಳಿಗೆ ತೀವ್ರ ಕಿರಿಕಿರಿಯಾಗುತ್ತಿದೆ.
ಆದ್ದರಿಂದ ಉದ್ದೇಶಿತ ಪ್ರದೇಶಗಳಲ್ಲಿ ಹಾರ್ನ್ ಮಾಡದಂತೆ ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸಂಸ್ಥೆಯು ಸರಣಿ ಜಾಗೃತಿ ಅಭಿಯಾನ ನಡೆಸಿತ್ತು.
ಇದನ್ನೂ ಓದಿ;-ಹಣಕಾಸು ವಿವಾದ ಕೊಲೆಯಲ್ಲಿ ಅಂತ್ಯ
ಅಷ್ಟೇ ಅಲ್ಲ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರಿಗೂ ಮನವಿ ಸಲ್ಲಿಸಿ, ನಿಲ್ದಾಣಗಳಲ್ಲಿ ಈ ಸಂಬಂಧ ಫಲಕಗಳನ್ನು ಅಳವಡಿಸುವಂತೆ ಕೋರಿತ್ತು. ಇದಕ್ಕೆ ಸ್ಪಂದಿಸಿದ ನಿಗಮವು ಟ್ರಿನಿಟಿ ನಿಲ್ದಾಣದಲ್ಲಿ “ಮೆಟ್ರೋ ಆವರಣ; ಹಾರ್ನ್ ಮಾಡಬೇಡಿ’ ಎಂದು ಫಲಕ ಅಳವಡಿಸಿದೆ.