Advertisement
ಇದರಲ್ಲಿ “ನಮ್ಮ ಮೆಟ್ರೋ’ ನಿರ್ಮಾ ಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೂರಾರು ಕಾರ್ಮಿ ಕರೂ ಸೇರಿದ್ದಾರೆ. ಪರಿಣಾಮ ಇತರೆ ಕ್ಷೇತ್ರ ಗಳಂತೆ ಮೆಟ್ರೋ ಯೋಜನೆಗೂ ಕಾರ್ಮಿಕರ ಕೊರತೆ ಉಂಟಾಗಿದ್ದು, ಇದನ್ನು ನೀಗಿಸಲು ಸುತ್ತಲಿನ ಗ್ರಾಮೀಣ ಭಾಗದಲ್ಲಿರುವ ಕಟ್ಟಡ ಕಾರ್ಮಿಕರ ಮೊರೆ ಹೋಗಲಾಗಿದೆ. ಕಾರ್ಮಿಕರ ಗುತ್ತಿಗೆದಾರರು ಹತ್ತಿರದ ಹಳ್ಳಿಗಳಿಗೆ ತೆರಳಿ, ಮನೆ ಕಟ್ಟುವ ಕಾರ್ಮಿಕರ ಮನವೊಲಿಸಿ ನಗರಕ್ಕೆ ಕರೆತರುತ್ತಿದ್ದಾರೆ. ಆದರೆ, ಇಲ್ಲಿಗೆ ಬರುತ್ತಿದ್ದಂತೆ ನೂರಾರು ಟನ್ ಗಾತ್ರದ ದೈತ್ಯ ಸ್ಲ್ಯಾಬ್‌ಗಳನ್ನು ನೋಡಿ ದಂಗಾಗುತ್ತಿದ್ದಾರೆ. “ಈ ಮೆಟ್ರೋ ಸಹವಾಸ ಬೇಡ ಸರ್. ನಮ್ಮನ್ನು ವಾಪಸ್ ಊರಿಗೆ ಕಳುಹಿಸಿಕೊಡಿ’ ಎಂದು ಗುತ್ತಿಗೆದಾರರು ಹಾಗೂ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಹೇಳುತ್ತಿದ್ದಾರೆ.
Related Articles
Advertisement
ಉಳಿದವರ ಹಿಡಿದಿಡುವ ಸವಾಲು: ವಲಸೆಯಿಂದ “ನಮ್ಮ ಮೆಟ್ರೋ’ ಯೋಜನೆ ಪ್ರಗತಿಗೆ ಹಿನ್ನಡೆಯಾಗುವುದರ ಜತೆಗೆ ಯೋಜನಾ ವೆಚ್ಚ ಹೆಚ್ಚಳ ಆಗುವ ಸಾಧ್ಯತೆ ಇದೆ. ಮರುವಲಸೆ ಹೋದವರಲ್ಲಿ ಸುರಂಗ ಮಾರ್ಗ ನಿರ್ಮಾಣ, ಎತ್ತರಿಸಿದ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಇದ್ದಾರೆ. ಸಾಮಾನ್ಯವಾಗಿ ಮೆಟ್ರೋ ಯೋಜನೆಯಲ್ಲಿ ಕಾಂಕ್ರೀಟ್, ಎಲೆಕ್ಟ್ರಿಕ್, ಶೆಟರಿಂಗ್ ಸೇರಿದಂತೆ ನಾನಾ ವಿಭಾಗಗಳಲ್ಲಿ ಪ್ರತಿ ಕಾಮಗಾರಿಯು ಒಂದಕ್ಕೊಂದು ಪೂರಕವಾಗಿರುತ್ತದೆ.
ಯಾವುದಾದರೂ ಒಂದು ತಂಡ ಹೋದರೂ, ಉಳಿದ ಕೆಲಸ ಮುಂದುವರಿಸಲು ಕಷ್ಟವಾಗುತ್ತದೆ. ಇದರ ಜತೆಗೆ ಕೆಲವರು ಊರುಗಳಿಗೆ ವಾಪಸ್ ಹೋಗಿರುವುದರಿಂದ, ಉಳಿದವರನ್ನು ಹಿಡಿದಿಡುವುದು ಕೂಡ ಸವಾಲಾಗಿದೆ. ಒತ್ತಾಯಪೂರ್ವಕವಾಗಿ ತಡೆಯುವಂತೆಯೂ ಇಲ್ಲ. ಈ ಮಧ್ಯೆ ರಾಜ್ಯದಲ್ಲೂ ನಿತ್ಯ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಲ್ಲಿ ಆತಂಕ ಮತ್ತಷ್ಟು ಮನೆಮಾಡಿದೆ. ಹಾಗಾಗಿ, ಮರುವಲಸಿಗರ ಪ್ರಮಾಣ ಅಧಿಕವಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಉದ್ಯೋಗ ಖಾತರಿ ಬಳಸಿಕೊಳ್ಳಲು ತಜ್ಞರ ಸಲಹೆ: “ನಮ್ಮ ಮೆಟ್ರೋ’ ಯೋಜನೆ ನಿರ್ಮಾಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿ ಕಾರ್ಮಿಕರನ್ನು ಕರೆತಂದು ಬಳಸಿಕೊಳ್ಳುವ ಅವಶ್ಯಕತೆ ಇದೆ ಎಂಬ ಸಲಹೆ ತಜ್ಞರಿಂದ ವ್ಯಕ್ತವಾಗಿದೆ. ಸ್ಥಳೀಯವಾಗಿ ಸಾಕಷ್ಟು ಕಾರ್ಮಿಕರು ಇದ್ದಾರೆ. ಅವರಿಗೆ ಉದ್ಯೋಗ ಖಾತರಿ ಅಡಿ ಕೆಲಸ ನೀಡಬೇಕು. ಇದರಿಂದ ಬಿಎಂಆರ್‌ಸಿಎಲ್ ಎದುರಿಸುತ್ತಿರುವ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗಲಿದೆ. ಲ್ಲರೂ ಕೌಶಲ್ಯಯುತ ಕಾರ್ಮಿಕರೇ ಆಗಿರುವುದಿಲ್ಲ. ತರಬೇತಿ ನೀಡಿ ತಯಾರು ಮಾಡಬೇಕಾಗುತ್ತದೆ. ಇದಕ್ಕಾಗಿ ಶೇ. 50ರಷ್ಟು ಕೌಶಲ್ಯ ಇದ್ದರೆ ಸಾಕು ಎಂದು ಮೆಟ್ರೋ ತಜ್ಞರು ಅಭಿಪ್ರಾಯಪಡುತ್ತಾರೆ.
* ವಿಜಯಕುಮಾರ್ ಚಂದರಗಿ