Advertisement

ಮೀಟೂ: ಶ್ರುತಿ ಪರ ಕಿರಿಕ್ ಹುಡುಗಿ ಬ್ಯಾಟಿಂಗ್

04:12 PM Oct 22, 2018 | Team Udayavani |

ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಮೀಟೂ ಅಭಿಯಾನ ಶುರುವಾದ ಮೇಲೆ ನಟಿಯರೂ ಸಿಡಿದೆದ್ದಿದ್ದಾರೆ. ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ್ದ ಶ್ರುತಿ ಹರಿಹರನ್ ಬೆನ್ನಿಗೆ ಶ್ರದ್ಧಾ ಶ್ರೀನಾಥ್ ಹಾಗೂ ರಾಗಿಣಿ ದ್ವಿವೇದಿ ನಿಂತ ಬೆನ್ನಲ್ಲೇ ಇದೀಗ ಮತ್ತೊಬ್ಬ ನಟಿ ಸಂಯುಕ್ತಾ ಹೆಗ್ಡೆ ಕೂಡ ಅವರಿಗೆ ಸಾಥ್ ನೀಡಿದ್ದಾರೆ.

Advertisement

ಹೌದು! ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಶ್ರುತಿ ಹರಿಹರನ್ ಬೆನ್ನಿಗೆ ನಿಂತಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ಹಣ ಇದೆ. ಆದ್ದರಿಂದ ಅವರಿಗೆ ಜನರು ಬೆಂಬಲ ಕೊಡುತ್ತಾರೆ. ಹಾಗಂದ ಮಾತ್ರಕ್ಕೆ ಕೀಳು ಮಟ್ಟದ ವರ್ತನೆ ತೋರಲು ಅವರಿಗೆ ಯಾರು ಅಧಿಕಾರ ಕೊಟ್ಟವರು ಎಂದು ಕಿಡಿಕಾರಿದ್ದಾರೆ.

ನಟಿಯರು ತಮಗಾದ ನೋವನ್ನು ಹಂಚಿಕೊಂಡರೆ ಬೇರೆಯವರು ಟೀಕೆ ಮಾಡುತ್ತಾರೆ. ಅಲ್ಲದೇ ನಮಗಂತೂ ನಟರಷ್ಟು ಸಂಬಳ ಕೊಡಲ್ಲ. ದಯವಿಟ್ಟು ಕನಿಷ್ಟ ಗೌರವವನ್ನಾದರೂ ಕೊಡಬೇಕು. ಇದರ ವಿರುದ್ದ ನಾವೇನಾದರೂ ಮಾತನಾಡಿದರೆ ಬೇರೆ ನಟಿಯರನ್ನು ಚಿತ್ರರಂಗಕ್ಕೆ ತರುತ್ತಾರೆ. ನಿಮ್ಮ ಮನೆ ಹೆಣ್ಣು ಮಕ್ಕಳಿಗೆ ಹೀಗಾಗಿದ್ದರೆ ಸುಮ್ಮನಿರುತ್ತೀರಾ ಅಂತ ಕಿರಿಕ್ ನಟಿ ಸಂಯುಕ್ತಾ ಹೆಗ್ಡೆ ಟ್ವೀಟ್‍ನಲ್ಲಿ ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next