Advertisement

ಔಷಧಿ ಚೀಟಿ ಬರೆದರೆ ಕ್ರಮ

03:13 PM May 17, 2019 | Team Udayavani |

ಮುಳಬಾಗಿಲು: ರೋಗಿಗಳಿಗೆ ಹೊರಗಡೆಯಿಂದ ಔಷಧಿ ತರಲು ಚೀಟಿ ಬರೆದುಕೊಟ್ಟರೆ ಆ ವೈದ್ಯರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಯಾರೇ ಆಗಲೀ ಕೆರೆಗಳಲ್ಲಿ ಏನೇ ಚಟುವಟಿಕೆ ಕೈಗೊಳ್ಳಬೇಕಾದರೂ ಸರ್ಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕೆಂದು ಜಿಪಂ ಸಿಇಒ ಜಿ.ಜಗದೀಶ್‌ ಎಚ್ಚರಿಕೆ ನೀಡಿದರು.

Advertisement

ಗುರುವಾರ ನಗರದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಅವರು, ಮೆಡಿಕಲ್ ಸ್ಟೋರ್‌ನಲ್ಲಿ ನಾಯಿ ಕಡಿತಕ್ಕೆ ಔಷಧಿ ದಾಸ್ತಾನು ಇಲ್ಲವೆಂದು ನಾಮಫ‌ಲಕ ಹಾಕಿದ್ದನ್ನು ಕಂಡು ಫಾರ್ಮಾಸಿಸ್ಟ್‌ ಜಮೀರ್‌ಅಹಮದ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಅಲ್ಲದೇ, ಔಷಧಿಗಳ ಖರೀದಿಸಲು ಈಗಾಗಲೇ ಜಿಪಂ ಅನುದಾನ 10 ಲಕ್ಷ ಲಭ್ಯವಿದ್ದರೂ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳುವುದನ್ನು ಬಿಟ್ಟು ನಾಮಫ‌ಲಕ ಹಾಕಿರುವುದೇಕೆ ಎಂದು ಪ್ರಶ್ನಿಸಿ, ನಾಮಫ‌ಲಕ ತೆಗೆಸಿಹಾಕಿ 24 ಗಂಟೆಯೊಳಗಾಗಿ ಎಲ್ಲಾ ಔಷಧಿಗಳನ್ನು ದಾಸ್ತಾನು ಮಾಡಿಕೊಳ್ಳಲು ಗಡುವು ನೀಡಿದರು.

ಸ್ವಚ್ಛತೆ ಕಾಪಾಡಿ: ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಅಭಾವ ಕಂಡು ಪೌರಾಯುಕ್ತ ಎಸ್‌.ರಾಜು ಅವರನ್ನು ಸ್ಥಳಕ್ಕೆ ಕರೆಸಿ ಪ್ರತಿನಿತ್ಯ ಟ್ಯಾಂಕರ್‌ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು. ಹೆರಿಗೆ ವಿಭಾಗ ಪರಿಶೀಲಿಸಿ ರೋಗಿಗಳಿಂದ ಮಾಹಿತಿ ಪಡೆದು ಮಹಿಳಾ ವೈದ್ಯರು ಉತ್ತಮವಾಗಿ ಕಾರ್ಯನಿರ್ವಹಿಸಿರುವುದನ್ನು ಕಂಡು ಅಭಿನಂದಿಸಿದರಲ್ಲದೇ ತಾವು ಮುಂದಿನ ವಾರ ಬರುವಷ್ಟರಲ್ಲಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಯ್ದುಕೊಳ್ಳಬೇಕೆಂದು ತಾಕೀತು ಮಾಡಿದರು.

ದೇವರಾಯಸಮುದ್ರ ಗ್ರಾಪಂ ವ್ಯಾಪ್ತಿಯ ಮಲಪನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಪರಿಶೀಲಿಸಿದರು. ಗ್ರಾಮದಲ್ಲಿ ಈಗಾ ಗಲೇ ಸರ್ಕಾರದಿಂದ ಕುಡಿಯುವ ನೀರಿನ ಸೌಕರ್ಯಕ್ಕಾಗಿ 5 ಕೊಳವೆ ಬಾವಿ ಕೊರೆಸ ಲಾಗಿದ್ದು 3 ಕೊಳವೆ ಬಾವಿಗಳು ಬತ್ತಿ ಹೋಗಿ ವೆ. ಇನ್ನೆರಡರಲ್ಲಿ ನೀರು ಬರುತ್ತಿದೆ. ಆದರೂ ನೀರು ಕೊರತೆಯುಂಟಾಗಿದ್ದು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಗ್ರಾ ಮದಲ್ಲಿ 500 ರೂ.ಗಳಿಗೆ ನೀರು ಸರಬರಾಜು ಮಾಡಲು ಟ್ಯಾಂಕರ್‌ಗಳು ಯಾರೂ ಬರುತ್ತಿಲ್ಲ ಎಂದು ಪಿಡಿಒ ತಿಳಿಸಿದ್ದಾರೆ.

Advertisement

ಹೀಗಾಗಿ ಬೇರೆ ಗ್ರಾಮಗಳಿಂದ ಟ್ಯಾಂಕರ್‌ ತರಿಸಿ ನೀರು ಸರಬರಾಜು ಮಾಡುವಂತೆ ತಿಳಿಸಿದರಲ್ಲದೇ ಮಲ್ಲಪನಹಳ್ಳಿ ಕೆರೆಯಲ್ಲಿ ಗುತ್ತಿಗೆದಾರನೊಬ್ಬ ಅನಧಿಕೃತವಾಗಿ ಗೋಕುಂಟೆ ಮಾಡಲಾಗಿದ್ದು ಅವರ ವಿರುದ್ಧ ಪ್ರಕರಣ ದಾಖಲು ಮಾಡಲು ಪಿಡಿಒ ರಘುಪತಿಗೆ ಸೂಚಿಸಿದರು.

ಅಲ್ಲದೇ ಮಂಡಿಕಲ್ ಗ್ರಾಮದ ಕಲ್ಯಾಣಿ ಅಭಿವೃದ್ಧಿ ಕುರಿತು ಪ್ರತಿಕ್ರಿಯಿಸಿದ ಸಿಇಒ ಈ ವರ್ಷ ಜಲಾಮೃತ ಯೋಜನೆಯಲ್ಲಿ ಹಳ್ಳಿಗಳಲ್ಲಿನ ಕಲ್ಯಾಣಿ ಮತ್ತು ಗೋಕುಂಟೆ ಪುನಶ್ಚೇತನಗೊಳಿಸಿ ಜಲಮೂಲಗಳನ್ನು ಸಂರಕ್ಷಣೆ ಮಾಡಲಾಗುವುದೆಂದು ಹೇಳಿದರು.

ಆಡಳಿತಾಧಿಕಾರಿಗೆ ಸಿಇಒ ತಾಕೀತು

ಶೌಚಾಲಯ ಪರಿಶೀಲಿಸಿದಾಗ ಒಳಗಡೆ ಯಾರೊಬ್ಬರೂ ಕಾಲಿಡಲೂ ಆಗದಂತೆ ದುರ್ವಾಸನೆ ಬರುತ್ತಿರುವುದನ್ನು ಕಂಡ ಜಿಪಂ ಸಿಇಒ ಜಿ.ಜಗದೀಶ್‌ , ರೋಗಿಗಳು ಚಿಕಿತ್ಸೆ ಪಡೆದುಕೊಂಡು ಆರೋಗ್ಯವಂತರಾಗಲು ಆಸ್ಪತ್ರೆಗೆ ಬರುತ್ತಾರೆ. ಆದರೆ, ಬಂದ ರೋಗಿಗಳು ಈ ದುರ್ವಾಸನೆಯ ಶೌಚಾಲಯಕ್ಕೆ ಹೋದಲ್ಲಿ ಮತ್ತಷ್ಟು ರೋಗ ಉಲ್ಬಣವಾಗದೇ ಇರದು ನೀವೇನು ಮಾಡುತ್ತಿದ್ದೀರಿ ಎಂದು ಆಡಳಿತಾಧಿಕಾರಿ ಡಾ.ರಾಜೇಶ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೇ ಕೂಡಲೇ ಸ್ವಚ್ಛಗೊಳಿಸಲು ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದರು.
•ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿ: ವೈದ್ಯರಿಗೆ ಜಗದೀಶ್‌ ಸಲಹೆ
Advertisement

Udayavani is now on Telegram. Click here to join our channel and stay updated with the latest news.

Next