Advertisement

ಬ್ಯಾಲನ್‌ ಡಿ ಓರ್‌ ಸ್ಪರ್ಧೆಯಿಂದ ಹೊರಬಿದ್ದ ಮೆಸ್ಸಿ,ರೊನಾಲ್ಡೊ?

06:50 AM Nov 12, 2018 | Team Udayavani |

ಜ್ಯೂರಿಚ್‌: ಈ ಬಾರಿಯ ಪ್ರತಿಷ್ಠಿತ ಬ್ಯಾಲನ್‌ ಡಿ ಓರ್‌ ವಾರ್ಷಿಕ ಫ‌ುಟ್‌ಬಾಲ್‌ ಪ್ರಶಸ್ತಿ ಪಟ್ಟಿಯಿಂದ ಅರ್ಜೆಂಟೀನ ನಾಯಕ ಲಯೋನೆಲ್‌ ಮೆಸ್ಸಿ ಮತ್ತು ಪೋರ್ಚುಗಲ್‌ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಹೊರಬಿದ್ದಿದ್ದಾರೆ. 

Advertisement

ಕಳೆದ ಹತ್ತು ವರ್ಷದಿಂದ ಈ ಪ್ರಶಸ್ತಿಯನ್ನು ತಮ್ಮಿಬ್ಬರ ನಡುವೆಯೇ ಇಟ್ಟುಕೊಂಡಿರುವ ಮೆಸ್ಸಿ-ರೊನಾಲ್ಡೊ ಪಾರುಪತ್ಯ ಈ ವರ್ಷ ಅಂತ್ಯವಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಸದ್ಯ ಪ್ರಶಸ್ತಿ ರೇಸ್‌ನಲ್ಲಿ ಕ್ರೊವೇಷ್ಯಾದ ಖ್ಯಾತ ಆಟಗಾರ ಲೂಕಾ ಮೊಡ್ರಿಕ್‌ ಹಾಗೂ ಫ್ರಾನ್ಸ್‌ ತಂಡದ ರಫಾಯೆಲ್‌ ವರೇನ್‌, ಕಿಲಿಯನ್‌ ಎಂಬಪ್ಪೆ ಇದ್ದಾರೆ. ರಿಯಲ್‌ ಮ್ಯಾಡ್ರಿಡ್‌ ತಂಡವನ್ನು ಚಾಂಪಿಯನ್‌ ಪಟ್ಟದಲ್ಲಿ ಕೂರಿಸಿದ, ಕ್ರೊವೇಷ್ಯಾ ಫ‌ುಟ್‌ಬಾಲ್‌ ವಿಶ್ವಕಪ್‌ ಫೈನಲ್‌ ತಲುಪಲು ನೆರವಾದ ಲೂಕಾ ಮೊಡ್ರಿಕ್‌ ಪ್ರಶಸ್ತಿ ಪಡೆಯುವ ಸಂಭವ ಜಾಸ್ತಿ ಎಂದು ಹೇಳಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next