Advertisement

ಮರಡೋನಾಗೆ ಗೌರವ ಸಲ್ಲಿಸಿ ದಂಡ ತೆತ್ತ ಲಿಯೋನೆಲ್‌ ಮೆಸ್ಸಿ

08:01 AM Dec 04, 2020 | keerthan |

ಬಾರ್ಸಿಲೋನಾ: ಕಳೆದ ವಾರ ನಿಧನ ಹೊಂದಿದ ಫ‌ುಟ್‌ಬಾಲ್‌ ಲೆಜೆಂಡ್‌ ಡೀಗೊ ಮರಡೋನಾ ಅವರಿಗೆ ಗೌರವ ಸಲ್ಲಿಸಿದ ಲಿಯೋನೆಲ್‌ ಮೆಸ್ಸಿ ಇದಕ್ಕಾಗಿ 600 ಯೂರೋ ದಂಡ ತೆತ್ತ ವಿಚಿತ್ರ ಘಟನೆಯೊಂದು ಸಂಭವಿಸಿದೆ.

Advertisement

ಜತೆಗೆ ಅವರ ಬಾರ್ಸಿಲೋನಾ ತಂಡಕ್ಕೆ 180 ಯೂರೋ ದಂಡವನ್ನೂ ವಿಧಿಸಲಾಗಿದೆ.

ಒಸಾಸುನಾ ಎದುರಿನ ಪಂದ್ಯದ ವೇಳೆ ಗೋಲೊಂದನ್ನು ಸಿಡಿಸಿದ ಮೆಸ್ಸಿ ಇದನ್ನು ಅಗಲಿದ ತಾರೆ ಮರಡೋನಾಗೆ ಅರ್ಪಿಸಿದರು. ಇದರ ಭರದಲ್ಲಿ ತಮ್ಮ ಬಾರ್ಸಾ ಶರ್ಟ್‌ ಅನ್ನು ಕಳಚಿ ಎಸೆದ ಮೆಸ್ಸಿ, ಇದರೊಳಗಡೆ ಧರಿಸಿದ್ದ ಮರಡೋನಾಗೆ ಸೇರಿದ ನ್ಯೂವೆಲ್ಸ್‌ ಓಲ್ಡ್‌ ಬಾಯ್ಸ ತಂಡದ 10ನೇ ನಂಬರ್‌ ಅಂಗಿಯನ್ನು ಪ್ರದರ್ಶಿಸಿದ್ದರು. ಈ ಕಾರಣಕ್ಕಾಗಿ ಅವರೀಗೆ ಹಳದಿ ಕಾರ್ಡ್‌ ಕೂಡ ತೋರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next