Advertisement

Hamas ದಾಳಿಯಿಂದ ವೃದ್ಧೆಯ ರಕ್ಷಿಸಿದ ಮೆಸ್ಸಿ ಅಭಿಮಾನ!

12:53 AM Mar 09, 2024 | Team Udayavani |

ಜೆರುಸಲೇಂ: ಕಳೆದ ವರ್ಷ ಅ.7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ದಾಳಿ ಮಾಡಿದ್ದ ಸಮಯದಲ್ಲಿ ವೃದ್ಧೆ ತಾನು ಮೆಸ್ಸಿ ಊರಿನವಳು ಎಂದು ಹೇಳಿ ತಪ್ಪಿಸಿಕೊಂಡ ಘಟನೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

Advertisement

ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ದಾಳಿ ಮಾಡಿದ್ದ ಸಮಯದಲ್ಲಿ ಅರ್ಜೆಂಟೀನಾದ ಮಹಿಳೆ ಎಸ್ತರ್‌ ಕ್ಯೂನೋ (90) ಅವರ ಮನೆಯಲ್ಲಿದ್ದ 8 ಮಂದಿಯನ್ನು ಅಪಹರಿಸಿದ್ದರು. ಉಗ್ರನಿಗೆ ತಾನು ಮೆಸ್ಸಿ ಊರಿನವಳು ಎಂದು ಹೇಳಿ ಎಸ್ತರ್‌ ಪಾರಾಗಿದ್ದರು. ಹಮಾಸ್‌ ಉಗ್ರ ಸಹ ಮೆಸ್ಸಿ ಅಭಿಮಾನಿ­ಯಾಗಿದ್ದು, ಹೆಸರು ಕೇಳುತ್ತಲೇ ಫೋಟೋ ತೆಗೆಸಿಕೊಂಡಿದ್ದ. ಆಕೆಯನ್ನು ಸುರಕ್ಷಿತವಾಗಿ ಮನೆಯೊಳಗೆ ಇರುವಂತೆ ಹೇಳಿ ಹೋಗಿದ್ದ ಎಂದು ಎಸ್ತರ್‌ ಹೇಳಿಕೊಂಡಿದ್ದಾರೆ.

ಹಮಾಸ್‌ ಉಗ್ರರಿಂದ ಅಪಹರಣ­ಕ್ಕೊಳ­ಗಾಗಿದ್ದ ಆಕೆಯ ಕುಟುಂಬದವರು ಕದನ ವಿರಾಮ ಒಪ್ಪಂದದಿಂದಾಗಿ ಬಿಡುಗಡೆಗೊಂಡಿ­ದ್ದಾರೆ. ಎಸ್ತರ್‌ ಮೊಬೈಲ್‌ನಲ್ಲಿದ್ದ ಉಗ್ರನ ಫೋಟೋ ನೋಡಿ ಮನೆಯವರು ಪ್ರಶ್ನಿಸಿದಾಗ ಈ ವಿಷಯವನ್ನು ಎಸ್ತರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next