Advertisement

ಸಾಯುವ ಮುನ್ನ ಉಪನ್ಯಾಸಕನಿಗೆ ಸಂದೇಶ!

06:10 AM Mar 02, 2019 | |

ಬೆಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಆತ್ಮಹತ್ಯೆಗೆ ಶರಣಾಗುವುದಕ್ಕೂ ಮೊದಲು ವಿದ್ಯಾರ್ಥಿನಿಯು, “ನನಗೆ ಬದುಕಲು ಇಷ್ಟವಿಲ್ಲ. ಸಾಯುತ್ತಿದ್ದೇನೆ’ ಎಂದು ಉಪನ್ಯಾಸಕನಿಗೆ ಮೆಸೇಜ್‌ ಕಳುಹಿಸಿರುವುದು ಪೊಲೀಸರ ವೇಳೆ ಬೆಳಕಿಗೆ ಬಂದಿದೆ.

Advertisement

ವಿದ್ಯಾರ್ಥಿನಿ ಕಳುಹಿಸಿದ ಮೆಸೇಜ್‌ಗೆ ಪ್ರತಿಕ್ರಿಯಿಸಿರುವ ಉಪನ್ಯಾಸಕ “ದುಡುಕಿ ನಿರ್ಧಾರ ತೆಗೆದುಕೊಳ್ಳಬೇಡ’ ಎಂದು ಬುದ್ಧಿವಾದ ಹೇಳಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಯಿಂದ ಹೆದರಿದ ಉಪನ್ಯಾಸಕ, ಬಂಧನ ಭೀತಿಯಿಂದ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾನೆ. 

ತುಮಕೂರು ರಸ್ತೆಯ ಎಂಟನೇ ಮೈಲಿಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸುಷ್ಮಾ (ಹೆಸರು ಬದಲಾಯಿಸಲಾಗಿದೆ), ಫೆ.26ರಂದು ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆಗೆ ಶರಣಾದ ಸುಷ್ಮಾ ತಂದೆ, ಉಪನ್ಯಾಸಕ ಉದಯ್‌ ಮಗಳಿಗೆ ಆಗಾಗ ಮೆಸೇಜ್‌ ಮಾಡುತ್ತಿದ್ದ. ಆಕೆ ಆತ್ಮಹತ್ಯೆ ಮಾಡಿಕೊಂಡ ದಿನವೂ ಮೆಸೇಜ್‌ ಮಾಡಿದ್ದಾನೆ. ಹೀಗಾಗಿ ಆತನ ಪ್ರೇರಣೆಯಿಂದಲೇ ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆರೋಪಿಸಿ ಬಾಗಲಕುಂಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉಪನ್ಯಾಸಕ ಉದಯ್‌ ವಿರುದ್ಧ “ಆತ್ಮಹತ್ಯೆಗೆ ಪ್ರಚೋದನೆ’ ನೀಡಿದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆತನ ಬಂಧನಕ್ಕೆ ಬಲೆಬೀಸಿದ್ದಾರೆ. ಮೃತ ಸುಷ್ಮಾಳ ಮೊಬೈಲ್‌ ಫೋನ್‌ ಪರಿಶೀಲಿಸಲಾಗಿದ್ದು, ಸುಷ್ಮಾ ಹಾಗೂ ಉದಯ್‌ ನಡುವೆ ಹಲವು ಮೆಸೇಜ್‌ಗಳು ರವಾನೆಯಾಗಿವೆ.

Advertisement

ಕೆಲವು ಮೆಸೇಜ್‌ಗಳು ಡಿಲೀಟ್‌ ಆಗಿವೆ. ಘಟನೆ ನಡೆದ ದಿನದಂದೇ ಉದಯ್‌ ತನ್ನ ಮೊಬೈಲ್‌ ಸ್ವಿಚ್‌ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು. ಮೃತ ವಿದ್ಯಾರ್ಥಿನಿ ಸುಷ್ಮಾ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿಯೇ ಉದಯ್‌ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರಿಗೂ ಆತ್ಮೀಯತೆಯಿತ್ತು.

ಇಬ್ಬರು ಪರಸ್ಪರ ಮೆಸೇಜ್‌ ಮಾಡುತ್ತಿದ್ದರು. ಈ ವಿಚಾರ ಪೋಷಕರಿಗೂ ತಿಳಿದಿತ್ತು. ಆದರೆ, ಸಹಪಾಠಿ ವಿದ್ಯಾರ್ಥಿ ಇರಬಹುದು ಎಂದು ಸುಮ್ಮನಾಗಿದ್ದರು. ಜತೆಗೆ, ಸುಷ್ಮಾ ಕೂಡ ವಿಧ್ಯಾಭ್ಯಾಸದಲ್ಲಿ ಮುಂದಿದ್ದರು. ಹೀಗಾಗಿ, ಹೆತ್ತವರು ಹೆಚ್ಚಾಗಿ ತಲೆಕೆಡಿಸಿಕೊಂಡಿರಲಿಲ್ಲ.

ಪರೀಕ್ಷೆ ಹಿನ್ನೆಲೆಯಲ್ಲಿ ಓದುವ ಸಂಬಂಧ ಸುಷ್ಮಾ, ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಫೆ.26ರಂದು ತಂದೆ ಕೆಲಸಕ್ಕೆ ಹೋಗಿದ್ದರು. ಆಕೆಯ ಸಹೋದರಿ ಕಾಲೇಜಿಗೆ ತೆರಳಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ತಾಯಿ ಅಂಗಡಿಗೆ ತೆರಳಿದಾಗ, ಒಳಗಿನಿಂದ ಡೋರ್‌ ಲಾಕ್‌ ಮಾಡಿಕೊಂಡಿದ್ದ ಸುಷ್ಮಾ, ಫ್ಯಾನಿಗೆ ನೇಣುಬಿಗಿದುಕೊಂಡು ಮೃತಪಟ್ಟಿದ್ದಳು.

ಅಂಗಡಿಯಿಂದ ಮರಳಿದ ತಾಯಿ ಎಷ್ಟೇ ಬಾಗಿಲು ಬಡಿದರೂ ಒಳಗಡೆಯಿಂದ ಯಾವುದೇ  ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಮತ್ತೂಂದು ಕೀಲಿ ಬಳಸಿ ಬಾಗಿಲು ತೆಗೆದು ನೋಡಿದಾಗ ಸುಷ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next