Advertisement
ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಎಲ್ಲ ವರ್ಗಗಳ ಬಳಕೆದಾರರನ್ನು ಗಮನದಲ್ಲಿರಿಸಿ ಈ ಬೆಲೆ ಏರಿಕೆಯ ಪ್ರಸ್ತಾವವನ್ನು ಮೆಸ್ಕಾಂ ಮಂಡಿಸಿದೆ. ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿಯು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ.
2019ರಲ್ಲಿ ಮೆಸ್ಕಾಂ ಪ್ರತಿ ಯೂನಿಟ್‌ಗೆ 1.38 ರೂ. ದರ ಏರಿಸಬೇಕೆಂದು ಪ್ರಸ್ತಾವ ಸಲ್ಲಿಸಿತ್ತು. ಕೆಇಆರ್‌ಸಿ ಬೆಲೆ ಏರಿಕೆ ಬಗ್ಗೆ ಸಾರ್ವಜನಿಕ ವಿಚಾರಣೆ ಸಭೆ ನಡೆಸಿ ಅಂತಿಮ ವಾಗಿ ಮೆಸ್ಕಾಂ ಸಹಿತ ಎಲ್ಲ ಎಸ್ಕಾಂಗಳಲ್ಲಿ ಸರಾಸರಿ ಪ್ರತಿ ಯೂನಿಟ್‌ಗೆ 33 ಪೈಸೆ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು. ಮೆಸ್ಕಾಂ ವ್ಯಾಪ್ತಿಯಲ್ಲಿ ಗೃಹಬಳಕೆಯ ವಿದ್ಯುತ್‌ಗೆ ನಗರ , ಗ್ರಾಮಾಂ ತರ ಪ್ರದೇಶಗಳಲ್ಲಿ ಯೂನಿಟ್‌ಗೆ 25 ಪೈಸೆ ಮಾತ್ರ ಏರಿಕೆಯಾಗಿತ್ತು. ಕಳೆದ ವರ್ಷ ಫೆ. 7ರಂದು ಮಂಗಳೂರಿನಲ್ಲಿ ವಿದ್ಯುತ್ ದರ ಪರಿಷ್ಕರಣೆ ಕುರಿತಂತೆ ಸಾರ್ವಜನಿಕ ವಿಚಾರಣೆ ಸಭೆ ನಡೆದಿತ್ತು. ಎ. 1ರಿಂದ ಪರಿಷ್ಕೃತ ದರ ಜಾರಿಗೊಳ್ಳಬೇಕಿದ್ದರೂ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಯಿಂದ ಮುಂದೂಡಲ್ಪಟ್ಟಿತ್ತು. ಬಳಿಕ ದರ ಹೆಚ್ಚಳವು ಮೇ 31ರಂದು
ಎಪ್ರಿಲ್‌ನಿಂದ ಪೂರ್ವಾನ್ವಯ ವಾಗುವಂತೆ ಜಾರಿಗೆ ಬಂದಿತ್ತು.
Related Articles
ದರ ಪರಿಷ್ಕರಣೆ ಬಗ್ಗೆ ಸಾರ್ವಜನಿಕರಿಗೆ ನಿಗದಿತ ಚ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಇದೆ. ಸ್ವೀಕೃತಿ ಅಧಿಕಾರಿ, ಕೆಇಆರ್‌ಸಿ, 16ಸಿ-1, ಮಿಲ್ಲರ್ ಟ್ಯಾಂಕ್ ಬೆಡ್ ಏರಿಯಾ, ವಸಂತ ನಗರ, ಬೆಂಗಳೂರು ಇವರಿಗೆ 6 ಸೆಟ್‌ಗಳಲ್ಲಿ ಸಲ್ಲಿಸಬೇಕು. ಒಂದು ಪ್ರತಿಯನ್ನು ಅಧೀಕ್ಷಕ ಎಂಜಿನಿಯರ್ (ವಾಣಿಜ್ಯ), ಕಾರ್ಪೊರೇಟ್ ಕಚೇರಿ, ಮೆಸ್ಕಾಂ ಭವನ, ಬಿಜೈ, ಮಂಗಳೂರು ಅವರಿಗೆ ಪ್ರಮಾಣ ಪತ್ರ ಸಮೇತ ಕಳುಹಿಸಿಕೊಡಬೇಕು.
Advertisement