Advertisement
ಚಾರಣಿಗರ ಸ್ವರ್ಗ:
Related Articles
Advertisement
ಬೆಟ್ಟದ ತುದಿಯಲ್ಲಿದೆ ಗಣಪತಿ ಮಂದಿರ:ಮೇರುತಿ ಪರ್ವತದ ತುತ್ತತುದಿಯನ್ನು ತಲುಪಿದರೆ ಚಾರಣಿಗರಿಗೆ ಪ್ರಕೃತಿ ಸೌಂದರ್ಯದ ಜೊತೆ ದೇವರ ದರುಶನದ ಭಾಗ್ಯ ಕೂಡ ಇಲ್ಲಿ ಸಿಗುತ್ತದೆ, ಬೆಟ್ಟದ ತುದಿಯಲ್ಲಿ ಗಣಪತಿ ದೇವರ ಗುಡಿಯೊಂದಿದ್ದು ಇಲ್ಲಿ ಮಾರ್ಚ್ ತಿಂಗಳಿನಲ್ಲಿ ದೇವರಿಗೆ ವಿಶೇಷ ಪೂಜೆಯನ್ನು ಊರಿನಜನರೆಲ್ಲರೂ ಸೇರಿ ನಡೆಸುತ್ತಾರೆ, ಅಂತೆಯೇ ತಪಸಾಣೆಯಲ್ಲಿ ಹೋಮ ಹವನಗಳನ್ನು ನಡೆಸಿಕೊಂಡುಬರುವುದು ಹಿಂದಿನಿಂದಲೂ ವಾಡಿಕೆಯಲ್ಲಿತ್ತು. ಬೆಟ್ಟದ ತುದಿಯಲ್ಲಿ ನಿಂತುಕಣ್ಣು ಹಾಯಿಸಿದರೆ ಒಂದುಕಡೆ ಕಳಸ ಹೊರನಾಡು ದೇವಸ್ಥಾನ ಕಾಣಸಿಗುತ್ತದೆ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಗಿರಿಶಿಖರಗಳನ್ನು ಕಣ್ತುಂಬಿಕೊಳ್ಳಬಹುದು, ಬೆಟ್ಟದ ಬುಡದಲ್ಲಿ ನಿಂತು ಪರ್ವತದ ತುದಿಯನ್ನು ನೋಡಿದಾಗ ಬಾನುಭುವಿ ಸಂಗಮಿಸಿದಂತೆ ಗೋಚರಿಸುತ್ತದೆ. ತಿಂಡಿ ತಿನಿಸು ನೀವೇ ಜವಾಬ್ದಾರರು:
ಚಾರಣಿಗರು ಇಲ್ಲಿಗೆ ಬರುವಾಗ ತಮಿಗೆ ಬೇಕಾಗಿರುವ ತಿಂಡಿ ತಿನಿಸುಗಳನ್ನು ತಾವೇ ತರಬೇಕು ಇಲ್ಲಿ ಯಾವುದೇ ರೀತಿಯ ತಿಂಡಿ ತಿನಿಸುಗಳು ಸಿಗುವುದಿಲ್ಲ, ಬಸರಿಕಟ್ಟೆಯಲ್ಲಿ ತಿಂಡಿ ತಿನಿಸುಗಳನ್ನು ಪಡೆದುಕೊಳ್ಳಬಹುದು. ಜನಾಕರ್ಷಣೆ ಕಡಿಮೆ :
ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿ, ಬಾಬಾ ಬುಡನಗಿರಿ, ಕೆಮ್ಮಣ್ಣುಗುಂಡಿ ಹೀಗೆ ಹಲವಾರು ಗಿರಿಧಾಮಗಳು ಹೆಚ್ಚು ಪ್ರಚಲಿತದಲ್ಲಿ ಇದೆ ಆದರೂ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿರುವ ಮೇರುತಿ ಪರ್ವತ ಹೆಚ್ಚಿನ ಜನಾಕರ್ಷಣೆಯನ್ನು ಪಡೆಯದಿರುವುದು ಬೇಸರದ ಸಂಗತಿ. ಈ ಬೆಟ್ಟ ಇನ್ನಷ್ಟು ಜನಾಕರ್ಷಣೆಯನ್ನು ಪಡೆಯಬೇಕಾಗಿದೆ ಎನ್ನುತ್ತಾರೆ ಇಲ್ಲಿನ ಜನರು. ಭೇಟಿಹೇಗೆ :
ಮೇರುತಿ ಪರ್ವತ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಹತ್ತಿರದ ಪ್ರದೇಶ, ಕಳಸದಿಂದ ಬಸ್ರಿಕಟ್ಟೆ ಮಾರ್ಗದಲ್ಲಿ ಪ್ರಯಾಣಿಸಿದರೆ ಮೇಥಿಖಾನ್ ಎಸ್ಟೇಟ್ ಎದುರುಗೊಳ್ಳುತ್ತದೆ ಇಲ್ಲಿಂದ ಅನುಮತಿಯನ್ನು ಪಡೆದು ಚಾರಣ ಮುಂದುವರಿಸಬೇಕು. ಸ್ವತ್ಛತೆಯನ್ನುಕಾಪಾಡಿ :
ಇಲ್ಲಿಗೆ ಬರುವ ಚಾರಣಿಗರು ಬೆಟ್ಟದ ಸೌಂದರ್ಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಸುರಕ್ಷತೆ ವಹಿಸಬೇಕು, ತಾವು ತಂದಂತಹ ತಿಂಡಿ ತಿನಿಸುಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಹಾಳುಮಾಡದೆ ಪರ್ವತದ ಸೌಂದರ್ಯ ಇಮ್ಮಡಿಗೊಳಿಸಲು ಸಹಕರಿಸಿ ಜೊತೆಗೆ ಮೇರುತಿ ಪರ್ವತದ ಪ್ರಚಾರ ಹೊರ ಜಗತ್ತಿಗೂ ಹಬ್ಬಲು ಸಹಕರಿಸಿ ಎಂಬುದು ನಮ್ಮ ಆಶಯ…