Advertisement
ಸೆಂಟ್ರಲ್ ರೈಲು ನಿಲ್ದಾಣ ಭಾಗದಿಂದ ಹಂಪನಕಟ್ಟೆ ವರೆಗೆ ಬರುವ ವಾಹನಗಳಿಗೆ ಇರುವ ಏಕಮುಖ ಸಂಚಾರದ ರಸ್ತೆಯನ್ನು ಬಂದ್ ಮಾಡಿ, ಪರ್ಯಾಯವಾಗಿ ಸಮೀ ಪದ ಮಿಲಾಗ್ರಿಸ್ ಚರ್ಚ್‌ನ ಮುಂಭಾಗ ದಲ್ಲಿ ಅತ್ತಾವರಕ್ಕೆ ತೆರಳುವ ರಸ್ತೆ ವಿಸ್ತರಣೆಯತ್ತ ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಈ ಸಂಬಂಧ ಈಗಾ ಗಲೇ ರಸ್ತೆ ಅಭಿವೃದ್ಧಿಯ ಕೆಲಸ ಕೂಡ ಆರಂ ಭಿಸಲಾಗಿದೆ. ಜತೆಗೆ ರೈಲು ನಿಲ್ದಾಣದ ಮುಂಭಾಗ ದಿಂದ ಪುರಭವನ ಭಾಗಕ್ಕೆ ತೆರಳುವ ರಸ್ತೆ ಕೂಡ ಮತ್ತಷ್ಟು ಮೇಲ್ದರ್ಜೆಗೇರುವ ನಿರೀಕ್ಷೆಯಿದೆ. ಈ ಮೂಲಕ ಪ್ರಯಾಣಿಕರಿಗೆ ಸೂಕ್ತ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಸ್ಮಾರ್ಟ್‌ಸಿಟಿ ಯೋಜನೆಯಡಿ ವೆನ್ಲಾಕ್, ಲೇಡಿಗೋಶನ್ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಸದ್ಯ ವೆನ್ಲಾಕ್ ನ
ಎರಡು ಬ್ಲಾಕ್‌ಗಳು ಬೇರೆ ಬೇರೆಯಾಗಿ ಇರುವ ಕಾರಣದಿಂದ ಅದರ ಮಧ್ಯ ಭಾಗದಲ್ಲಿ ಸಾರ್ವ ಜನಿಕ ರಸ್ತೆ ಇದೆ. ಹೀಗಾಗಿ ಆಸ್ಪತ್ರೆಯ ಒಂದು ಬ್ಲಾಕ್‌ನಿಂದ ಇನ್ನೊಂದು ಬ್ಲಾಕ್‌ಗೆ ಸಂಚರಿಸಲು ರಸ್ತೆಯ ಮೇಲ್ಗಡೆ “ಸಂಪರ್ಕ ಸೇತುವೆ’ ನಿರ್ಮಿ ಸಲಾಗಿದೆ. ಇಲ್ಲಿ ರೋಗಿಗಳು ಅತ್ತಿಂದಿತ್ತ ಹೋಗಲು ಕಷ್ಟವಾಗುತ್ತಿದೆ ಎಂಬ ಆರೋಪ ಹಲವು ಸಮಯದಿಂದ ಕೇಳಿಬರುತ್ತಿತ್ತು. ವೆನ್ಲಾಕ್ ನ ಎಡಭಾಗದ ಬ್ಲಾಕ್‌ನಲ್ಲಿ ಟ್ರಾಮಾ ಸೆಂಟರ್, ಒಪಿಡಿ ಬ್ಲಾಕ್, ಮಕ್ಕಳ ಆಸ್ಪತ್ರೆಯ ಬ್ಲಾಕ್ ಈಗಾಗಲೇ ಕಾರ್ಯಾಚರಿಸುತ್ತಿದ್ದು, ಇದರ ಜತೆಗೆ ಹೊಸದಾಗಿ ಮೆಡಿಕಲ್ ಸೂಪರ್ ಸ್ಪೆಷಾಲಿಟಿ, ಆಯುಷ್ ವಿಭಾಗದ 2 ಕಟ್ಟಡಗಳಿವೆ. ಹೀಗಾಗಿ ಅಲ್ಲಿನ ಬ್ಲಾಕ್‌ಗೆ ವೆನ್ಲಾಕ್ ನ ಬಲ ಭಾಗದಿಂದ ರೋಗಿಗಳನ್ನು ಕರೆದುಕೊಂಡು ಹೋಗಲು, ಔಷಧ ಸಾಗಾಟ, ಆ್ಯಂಬುಲೆನ್ಸ್ ಸಂಚಾರಕ್ಕೂ ಸಮಸ್ಯೆಯಾಗುತ್ತಿದೆ. ಒಂದು ಬ್ಲಾಕ್‌ನಿಂದ ಇನ್ನೊಂದು ಬ್ಲಾಕ್‌ಗೆ ವೈದ್ಯರು, ರೋಗಿಗಳು, ಸಂಬಂಧಿಕರು ವಾಹನದಲ್ಲಿ ಕೂಡ ಸುತ್ತು – ಬಳಸಿ ಬರಬೇಕಾಗುತ್ತದೆ. ಹೀಗಾಗಿ ರೈಲು ನಿಲ್ದಾಣ ಭಾಗದಿಂದ ಇರುವ ರಸ್ತೆಯನ್ನು ಬಂದ್ ಮಾಡಲು ಉದ್ದೇಶಿಸಲಾಗಿದೆ.
Related Articles
ವೆನ್ಲಾಕ್ ಆಸ್ಪತ್ರೆ ಎರಡು ಬ್ಲಾಕ್‌ಗಳ ಮಧ್ಯೆ ಇರುವ ರಸ್ತೆಯನ್ನು ಬಂದ್ ಮಾಡಿ, ರೋಗಿಗಳ ಆರೋಗ್ಯದ ವಿಚಾರ ಗಮನದಲ್ಲಿಟ್ಟು ವೆನ್ಲಾಕ್ ಆಸ್ಪತ್ರೆಗೆ ಬಳಕೆ ಮಾಡುವ ಬಗ್ಗೆ ಈಗಾಗಲೇ ಅಂತಿಮ ಹಂತದ ಚರ್ಚೆ ನಡೆದಿದೆ. ಪ್ರಯಾಣಿಕರ ವಾಹನಗಳಿಗಾಗಿ ಮಿಲಾಗ್ರಿಸ್ ಚರ್ಚ್ ಮುಂಭಾಗದ ರಸ್ತೆಯನ್ನು ದ್ವಿಪಥವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಈ ಮೂಲಕ ಎರಡು ಬ್ಲಾಕ್‌ಗಳಾಗಿ ಬೇರೆ ಬೇರೆಯಾಗಿರುವ ವೆನ್ಲಾಕ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಅವಕಾಶವಾಗಲಿದೆ.
-ಡಾ| ರಾಜೇಂದ್ರ ಕೆ.ವಿ., ದ.ಕ. ಜಿಲ್ಲಾಧಿಕಾರಿ
Advertisement
ಅಭಿಪ್ರಾಯ ಪಡೆದು ಯೋಜನೆವೆನ್ಲಾಕ್ ಬಳಿ ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಬಗ್ಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ವೆನ್ಲಾಕ್ ನ ಎರಡು ಬ್ಲಾಕ್‌ನ ಮಧ್ಯದ ರಸ್ತೆಯ ಬದಲು ಮಿಲಾಗ್ರಿಸ್ ಮುಂಭಾಗದ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಪ್ರಸ್ತಾವನೆಯಿದೆ. ಈ ಬಗ್ಗೆ ಪ್ರಮುಖರ ಅಭಿಪ್ರಾಯ ಪಡೆದು ಯಾವ ರೀತಿ ಅಭಿವೃದ್ಧಿಗೊಳಿಸಬೇಕು ಎಂದು ಯೋಜನೆ ರೂಪಿಸಲಾಗುವುದು.
-ಡಿ. ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ