Advertisement

ಲೋಕಸಭಾ, ರಾಜ್ಯಸಭಾ ಟಿವಿ ಇನ್ಮುಂದೆ “ಸಂಸದ್ ಟಿವಿ”

04:32 PM Mar 02, 2021 | Team Udayavani |

ನವದೆಹಲಿ : ಸಂಸತ್ತಿನ ಉಭಯ ಸದನಗಳಾದ ರಾಜ್ಯ ಸಭೆ ಮತ್ತು ಲೋಕ ಸಭೆಗಳ ಕಲಾಪವನ್ನ ಪ್ರಸಾರ ಮಾಡುತ್ತಿದ್ದ ರಾಜ್ಯಸಭಾ ಮತ್ತು ಲೋಕಸಭಾ ಟಿವಿಯನ್ನ ವಿಲೀನ ಮಾಡಿದ್ದು, ಇನ್ಮುಂದೆ ಸಂಸದ್ ಟಿವಿ ಎಂದು ಕರೆಯಲಾಗುತ್ತದೆ. ಟಿವಿಗೆ  ಐಎಎಸ್ಅಧಿಕಾರಿ ರವಿ ಕಪೂರ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

Advertisement

ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಮತ್ತು ಲೋಕಸಭೆ ಸ್ಪೀಕರ್ಓಂ ಬಿರ್ಲಾ ತೀರ್ಮಾನದ ನಂತ್ರ ಆಡಳಿತಾತ್ಮಕ ಕಾರಣಗಳಿಂದಾಗಿ ನಿರ್ಧಾರಕ್ಕೆ ಬರಲಾಗಿದೆಯಂತೆ. ಅಲ್ಲದೆ ಆದೇಶವನ್ನು ಕೂಡಲೇ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ.

ಸಂಸದ್ಟಿವಿಯಲ್ಲಿ ಎರಡು ಚಾನೆಲ್ಗಳು ಇದ್ದು, ಒಂದರಲ್ಲಿ ಲೋಕಸಭೆ ಮತ್ತೊಂದರಲ್ಲಿ ರಾಜ್ಯಸಭೆ ಕಲಾಪಗಳನ್ನು ಪ್ರಸಾರ ಮಾಡಲಾಗುತ್ತದೆ. ಅಧಿವೇಶನ ಇಲ್ಲದ ಸಂದರ್ಭದಲ್ಲಿ ಸಾಮಾನ್ಯ ವಿಷಯವನ್ನು ಪ್ರಸಾರ ಮಾಡುತ್ತವೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next