ಹೊಸದಿಲ್ಲಿ: ದೇಶದ ಚುನಾವಣ ವ್ಯವಸ್ಥೆಯು, ಜನಪ್ರತಿನಿಧಿಗಳು ಜನರ ಮೇಲೆ ನಡೆಸುವ ದಬ್ಬಾಳಿಕೆಯನ್ನು ಹತ್ತಿಕ್ಕುವಲ್ಲಿ ಯಾವುದೇ ರೀತಿಯ ಪ್ರಯೋಜನಕ್ಕೆ ಬಾರದು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ವಿಷಾದಿಸಿದ್ದಾರೆ.
ದೇಶದ 17ನೇ ಮುಖ್ಯ ನ್ಯಾಯ ಮೂರ್ತಿ ಪಿ.ಡಿ. ದೇಸಾಯಿ ಸ್ಮಾರಕ ಪ್ರವಚನ ಕಾರ್ಯಕ್ರಮದಲ್ಲಿ “ರೂಲ್ ಆಫ್ ಲಾ’ ವಿಷಯದ ಬಗ್ಗೆ ಮಾತನಾಡಿದ ಅವರು, “ನಾಗರಿಕ ಸಮಾಜದ ನಡಾವಳಿಗಳು, ಮನುಷ್ಯದ ಘನತೆಯ ಕೈಗನ್ನಡಿಯಾ ಗಿರುತ್ತವೆ. ಹಾಗಾಗಿ ಜನಸಮೂಹ ತನ್ನದೇ ಆದ ಘನತೆಯನ್ನು ಹೊಂದಿದೆ. ಪ್ರಜಾಪ್ರಭುತ್ವಕ್ಕೆ ಅದೇ ಅಡಿಪಾಯ’ ಎಂದರು.
ನ್ಯಾಯಾಂಗದ ಸ್ವಾಯತ್ತತೆ: ನ್ಯಾಯಾಂಗ ವ್ಯವಸ್ಥೆಯು, ನಾಗರಿಕ ಸಮಾಜದಲ್ಲಿ ಕಾನೂನು ಸುವ್ಯ ವಸ್ಥೆಯನ್ನು ಕಾಪಾಡಲು ಇರುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಸಂವಿಧಾನದ ಆಶಯ ದಂತೆ ನ್ಯಾಯ ವಿಲೇವಾರಿ ಮಾಡುವ ದೊಡ್ಡ ಹೊಣೆಗಾರಿಕೆ ಸಂಸ್ಥೆಯ ಮೇಲಿದೆ. ಇಂಥ ಸಂಸ್ಥೆಯು ಸುಲಲಿತ ವಾಗಿ, ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸ ಬೇಕಾದರೆ ಅದರ ಸ್ವಾಯತ್ತತೆ ಕಾಪಾಡಿಕೊಳ್ಳುವುದು ಅತ್ಯವಶ್ಯ ಎಂದಿದ್ದಾರೆ.
ನಿಷ್ಠುರತೆ ಕಾಪಾಡಿಕೊಳ್ಳಬೇಕು: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನ್ಯಾಯಾಲಯದ ತೀರ್ಪುಗಳ ಬಗ್ಗೆ ಚರ್ಚೆಯಾಗುವ ಸಂಸ್ಕೃತಿ ಆರಂಭ ವಾಗಿದೆ. ಅಂಥ ಸಂದರ್ಭಗಳಲ್ಲಿ ತೀರ್ಪು ನೀಡಿದ ನ್ಯಾಯಮೂರ್ತಿಗಳ ವಿರುದ್ಧ ತೀಕ್ಷ್ಣ ಅಭಿ ಪ್ರಾಯಗಳೂ ವ್ಯಕ್ತವಾಗುತ್ತವೆ. ಆದರೆ ನ್ಯಾಯ ಮೂರ್ತಿಗಳು ಇದರಿಂದ ವಿಚಲಿತವಾಗಬಾರದು. ಸಾಮಾಜಿಕ ಜಾಲತಾಣಗಳ ಚರ್ಚೆಗಳ ಬಗ್ಗೆ ಆಲೋಚಿಸದೆ, ನಿಷ್ಠುರ, ನ್ಯಾಯಪರ ತೀರ್ಪುಗಳನ್ನು ನೀಡಬೇಕೆಂದು ಸಿಜೆಐ ಕಿವಿಮಾತು ಹೇಳಿದರು.
ಆತ್ಮವಿಮರ್ಶೆ ಕೈಗೊಳ್ಳಿ :
ಭಾರತ ಹಿಂದೆಂದೂ ಕಾಣದಂಥ ಸಾಂಕ್ರಾಮಿಕ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಜನರ ಸುರಕ್ಷತೆಗಾಗಿ ಜಾರಿಗೊಳಿಸಲಾಗಿ ರುವ ನಿಬಂಧನೆಗಳನ್ನು ನಾವು ಎಷ್ಟರ ಮಟ್ಟಿಗೆ ಪಾಲಿಸಿದ್ದೇವೆ ಎಂಬುದರ ಆತ್ಮವಿಮರ್ಶೆಯನ್ನು ನಾವೆಲ್ಲರೂ ಮಾಡಿಕೊಂಡರೆ ಆಗ, “ರೂಲ್ ಆಫ್ ಲಾ’ ವಿಚಾರ ಮನದಟ್ಟಾಗುತ್ತದೆ ಎಂದಿದ್ದಾರೆ.