ಮುಂಬಯಿ : ಪ್ರಖ್ಯಾತ ಚಿತ್ರ ನಿರ್ಮಾಪಕ ರಾಕೇಶ್ ಓಂಪ್ರಕಾಶ್ ಮೆಹ್ರಾ ಅವರು ನ.19ರ ವಿಶ್ವ ಟಾಯ್‌ಲೆಟ್ ದಿನದ ಅಂಗವಾಗಿ ತಮ್ಮ ಹೊಸ ಚಿತ್ರ “ಮೇರೇ ಪ್ಯಾರೇ ಪ್ರೈಮ್ ಮಿನಿಸ್ಟರ್’ ನ ಮೊದಲ ಪೋಸ್ಟರ್ ಅನ್ನು ಟ್ವಿಟರ್ ಮೂಲಕ ಅನಾವರಣ ಮಾಡಿದ್ದಾರೆ.
ಪೋಸ್ಟರ್‌ನಲ್ಲಿ ಕಂಡು ಬರುವಂತೆ ಪುಟ್ಟ ಬಾಲಕನೊಬ್ಬನು ಗೋಡೆಯ ಮೇಲೆ ಟಾಯ್‌ಲೆಟ್ ಸ್ಕೆಚ್ ಬಿಡಿಸಿರುತ್ತಾನೆ. ಆತನೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ಮರಾಠಿ ನಟಿ ಅಂಜಲಿ ಪಾಠಕ್ (ಸಿನೇಮಾದಲ್ಲಿ ಬಾಲಕನ ತಾಯಿ ಪಾತ್ರ ವಹಿಸಿದ್ದಾರೆ) ನಿಂತಿರುವುದು ಕಂಡು ಬರುತ್ತದೆ.
“ಮೇರೇ ಪ್ಯಾರೇ ಪ್ರೈಮ್ ಮಿನಿಸ್ಟರ್’ ಚಿತ್ರವು ತಾಯಿ-ಮಗನ ಸಂಬಂಧವನ್ನು ಹೃದಯಂಗಮವಾಗಿ ಸಾದರಪಡಿಸುತ್ತದೆ; ಮಾತ್ರವಲ್ಲ ಯಾವುದೇ ಪ್ರತಿಕೂಲ ಸನ್ನಿವೇಶವನ್ನು ಧನಾತ್ಮಕವಾಗಿ ಸ್ವೀಕರಿಸುವುದನ್ನು ಭರವಸೆಯೊಂದಿಗೆ ಕಲಿಸುತ್ತದೆ.
ಈ ಚಿತ್ರದಲ್ಲಿ ಬಾಲಕನು ತನ್ನ ಒಂಟಿ ತಾಯಿಗೆ (ಆಕೆಗಾಗಿ) ಒಂದು ಟಾಯ್‌ಲೆಟ್ ನಿರ್ಮಿಸುವುದನ್ನು ಬಹುವಾಗಿ ಬಯಸುತ್ತಾನೆ.
Related Articles
ಮಧ್ಯ ರಾತ್ರಿಯ ಹೊತ್ತಿಗೆ ಹೆದರುತ್ತಾ ಬಹಿರ್ದೆಶೆಗೆ ಹೋಗುವ ತನ್ನ ತಾಯಿಯ ಸುರಕ್ಷೆಯ ಬಗ್ಗೆ ಬಾಲಕನಿಗೆ ತುಂಬ ಭಯ ಮತ್ತು ಕಾಳಜಿ ಇರುತ್ತದೆ.
ಇದಕ್ಕೆ ಪರಿಹಾರ ಕಾಣಲು ಬಾಲಕನು ಪ್ರಧಾನ ಮಂತ್ರಿಗೆ ಕಾಗದ ಬರೆಯುತ್ತಾನೆ. ಮಾತ್ರವಲ್ಲ ಅದನ್ನು ಪ್ರಧಾನಿಗೆ ತಲುಪಿಸಲು ಮತ್ತು ಟಾಯ್‌ಲೆಟ್ ನೆರವು ಪಡೆಯಲು ಆತ ತನ್ನಿಬ್ಬರು ಸ್ನೇಹಿತರೊಂದಿಗೆ ದಿಲ್ಲಿಗೆ ಬರುತ್ತಾನೆ.
ಈ ಸಿನೇಮಾ ಹೊಸ ಭರವಸೆ, ವಿಶ್ವಾಸ ಮತ್ತು ಸ್ಫೂರ್ತಿಯನ್ನು ಜನಸಾಮಾನ್ಯರಲ್ಲಿ ಬಡಿದೆಬ್ಬಿಸುವಂತಿದೆ ಎಂದು ಚಿತ್ರ ನಿರ್ಮಾಪಕ ರಾಕೇಶ್ ಮೆಹ್ರಾ ಹೇಳಿದ್ದಾರೆ.