ನವದೆಹಲಿ: ಯಾವುದೇ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ತಡವಾಗಿ ದಾಖಲಿಸಿದರೂ ಅದಕ್ಕೆ ಮಾನ್ಯತೆಯಿದ್ದು, ತಡವಾಗಿದೆ ಎಂಬ ಕಾರಣಕ್ಕಾಗಿ ಅಂಥ ಸಾಕ್ಷಿಗಳನ್ನು ಅಮಾನ್ಯ ಮಾಡಲಾಗದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಮೂಲಕ, ಪ್ರಕರಣವೊಂದರಲ್ಲಿ ಕೋಲ್ಕತಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ನ್ಯಾ. ಯು.ಯು. ಲಲಿತ್, ನ್ಯಾ. ಎಸ್. ರವೀಂದ್ರ ಭಟ್ ಹಾಗೂ ನ್ಯಾ. ಬೇಲಾ ಎಂ. ತ್ರಿವೇದಿ ಅವರುಳ್ಳ ನ್ಯಾಯಪೀಠ ಎತ್ತಿಹಿಡಿದಿದೆ.
“ಪ್ರತ್ಯಕ್ಷ ಸಾಕ್ಷಿಗಳು ಕೆಲವೊಮ್ಮೆ ಅಪರಾಧಿಗಳ ಬೆದರಿಕೆಗೆ ಒಳಗಾಗಿರುತ್ತಾರೆ. ಕೆಲವೊಮ್ಮೆ ಅವರಿಗೆ ಭೀತಿಯೂ ಕಾಡಿರುತ್ತದೆ. ಹಾಗಾಗಿ, ಅವರು ಸಾಕ್ಷ್ಯ ನೀಡಲು ತಡವಾಗಬಹುದು.
ಹಾಗಾಗಿ, ತಡವಾಗಿ ಅವರ ಸಾಕ್ಷ್ಯ ದಾಖಲಿಸಿದಾಗ ಅದಕ್ಕೆ ಮಾನ್ಯತೆ ನೀಡಬೇಕು. ಅದರ ಜೊತೆಗೆ, ತಡವಾಗಿದ್ದಕ್ಕೆ ಇರುವ ಕಾರಣಗಳನ್ನು ಸೂಕ್ತವಾಗಿ ಉಲ್ಲೇಖಿಸಬೇಕು” ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ:ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಾಂಧವ್ಯ ವೃದ್ಧಿಗೆ ಆಸಕ್ತಿ : ಅಶ್ವತ್ಥನಾರಾಯಣ