Advertisement

ವ್ಯಾಪಾರಸ್ಥರ ಸ್ವಯಂ ಲಾಕ್‌ಡೌನ್‌

01:39 PM Jul 03, 2020 | Suhan S |

ನವಲಗುಂದ: ಪಟ್ಟಣದಲ್ಲಿಯೂ ಇಬ್ಬರಿಗೆ ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಸ್ವಯಂಪ್ರೇರಣೆಯಿಂದ ಲಾಕ್‌ಡೌನ್‌ಗೆ ವ್ಯಾಪಾರಸ್ಥರು ಮುಂದಾಗಿದ್ದು, ಶುಕ್ರವಾರದಿಂದ ಬೆಳಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ನಿರ್ಧರಿಸಿದ್ದಾರೆ.

Advertisement

ತಾಲೂಕಿನ ಮೊರಬ ಗ್ರಾಮದಲ್ಲಿ ಎಂಟ್ರಿಕೊಟ್ಟ ಕೋವಿಡ್ 40ಕ್ಕೂ ಹೆಚ್ಚು ಜನರಿಗೆ ತಗುಲಿದ್ದಲ್ಲದೆ ಅಕ್ಕಪಕ್ಕದ ಶಿರಕೋಳ, ಹಾಲಕುಸುಗಲ್ಲಕ್ಕೂ ವ್ಯಾಪಿಸಿದೆ. ಎರಡು ದಿನಗಳ ಹಿಂದಷ್ಟೆ ಪಟ್ಟಣದಲ್ಲಿಯೂ ಇಬ್ಬರಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟಿನ ಸಮಯವನ್ನು ಅಂಗಡಿಕಾರರೇ ಸ್ವಯಂಕೃತವಾಗಿ ಬದಲಾವಣೆ ಮಾಡಿದ್ದಾರೆ.

ಕ್ಷೌರದಂಗಡಿ ಬಂದ್‌: ಗ್ರಾಹಕರು ಎಲ್ಲಿಂದ ಬಂದರು ಎಂಬ ಮಾಹಿತಿ ಇರುವುದಿಲ್ಲ. ಅಲ್ಲದೇ ಕ್ಷೌರ ಮಾಡುವಾಗ ಅವರನ್ನು ಮುಟ್ಟಿ ಹತ್ತಿರದಿಂದ ಕ್ಷೌರ ಮಾಡಬೇಕಾಗುತ್ತದೆ. ಇದರಿಂದ ನಮಗೂ ಅಪಾಯ ತಪ್ಪಿದ್ದಲ್ಲವೆಂದು ತಿಳಿದ ಕ್ಷೌರಿಕ ಸಂಘದವರು ಸಭೆ ಮಾಡಿ ಜು. 1ರಿಂದ ತಾಲೂಕಿನ ಎಲ್ಲ ಕ್ಷೌರಿಕ ಅಂಗಡಿಗಳನ್ನು ಬಂದ್‌ ಮಾಡಿದ್ದಾರೆ. ಗ್ರಾಮೀಣ ಭಾಗದಿಂದ ಜನರ ಸಂಚಾರ ತಗ್ಗಿದ್ದರಿಂದ ಪಟ್ಟಣದ ಅನೇಕ ಹೋಟೆಲ್‌ಗ‌ಳು ಬಾಗಿಲು ಮುಚ್ಚಿವೆ. ಹೆಚ್ಚಿನ ಬಾಡಿಗೆ ಇದ್ದಂತಹ ಹೋಟೆಲ್‌ಗ‌ಳು ಅಂಗಡಿಯನ್ನು ಬಿಟ್ಟು ಹೋಗಿದ್ದಾರೆ.

ಕೋವಿಡ್ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸ್ವಯಂ ಪ್ರೇರಣೆಯಿಂದ ಜು. 3ರಿಂದ ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬೇಕೆಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ವ್ಯಾಪಾರಸ್ಥರು ಅಂಗಡಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿ ಸ್ಯಾನಿಟೈಜರ್‌ ನೀಡಿ ವ್ಯಾಪಾರ ಮಾಡಬೇಕು.– ಆರ್‌.ಎನ್‌. ಧಾರವಾಡ, ವರ್ತಕರ ಸಂಘದ ಅಧ್ಯಕ್ಷ

ಲಾಕ್‌ಡೌನ್‌ ಸಡಿಲಿಕೆ ಬಳಿಕ ಸ್ವಲ್ಪಮಟ್ಟಿಗೆ ಜನದಟ್ಟಣೆ ಪ್ರಾರಂಭವಾಗಿದೆ. ಆದರೆ ತಾಲೂಕಿನಲ್ಲಿ ಪ್ರಕರಣಗಳು ಕಂಡುಬಂದಾಗಿನಿಂದ ಹೋಟೆಲ್‌ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಜವಾಬ್ದಾರಿ ಇರುವುದರಿಂದ ಸೂಕ್ತ ಭದ್ರತೆಯಲ್ಲಿ ಮುಜಾಂಗ್ರತೆ ವಹಿಸಿ ಹೋಟೆಲ್‌ ನಡೆಸುವಂತಾಗಿದೆ. –ಶ್ರೀಶೈಲಯ್ಯ ಮೂಲಿಮನಿ, ಸ್ನೇಹಿತರ ಹೋಟೆಲ್‌ ಮಾಲೀಕ

Advertisement

ಪಟ್ಟಣದಲ್ಲಿ ಕೋವಿಡ್ ಪಾಸಿಟಿವ್‌ ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸಂಘದಿಂದ ಸಭೆ ಮಾಡಿ ಗುರುವಾರದಿಂದ 10 ದಿನ ಸ್ವಯಂಕೃತವಾಗಿ ಕ್ಷೌರದಂಗಡಿಗಳನ್ನು ಬಂದ್‌ ಮಾಡಿದ್ದೇವೆ. –ವಿಜಯ ಕಡ್ಲಸ್ಕರ, ನವಲಗುಂದ ಕ್ಷೌರಿಕ ಸಂಘದ ಅಧ್ಯಕ್ಷ

 

-ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next