ಬೆಂಗಳೂರು: ಆಟೋಮೊಬೈಲ್ ಕ್ಷೇತ್ರದ ಮರ್ಸಿಡೀಸ್ ಬೆನ್ಜ್ ಮೊಟ್ಟ ಮೊದಲ ಬಾರಿಗೆ ಸಿ-ಕ್ಲಾಸ್ ಸರಣಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಿಎಸ್-4 ಡೀಸೆಲ್ ಎಂಜಿನ್ ಐಷಾರಾಮಿ ಕಾರುಗಳನ್ನು ಬಿಡುಗಡೆ ಮಾಡಿದೆ.
ಇತೀ¤ಚೆಗೆ ನಗರದ ಕಸ್ತೂರ ಬಾ ರಸ್ತೆಯಲ್ಲಿರುವ ಟಿವಿಎಸ್ ಸುಂದರಂ ಮೋಟಾರ್ನಲ್ಲಿ ನೂತನ ಶ್ರೇಣಿಯ ನಾಲ್ಕು ಸಿಲಿಂಡರ್‌ಗಳ ಸಿ-220 ಡಿ ಮತ್ತು ಸಿ-300 ಡಿ ಕಾರುಗಳನ್ನು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶರತ್ ವಿಜಯರಾಘವನ್ ಅನಾವರಣಗೊಳಿಸಿ ಮಾತನಾಡಿದರು.
ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಹಾಗೂ ಅಳವಡಿಕೆಯಲ್ಲಿ ಜರ್ಮನಿಯ ಮರ್ಸಿಡೀಸ್ ಬೆನ್ಜ್ ಸದಾ ಒಂದು ಹೆಜ್ಜೆ ಮುಂದಿಟ್ಟಿರುತ್ತದೆ. ಆ ನಿಟ್ಟಿನಲ್ಲಿ ನೋಡುವುದಾದರೆ ಮರ್ಸಿಡೀಸ್ ಬೆನ್ಜ್ ಸಿ-ಕ್ಲಾಸ್ ಕಾರುಗಳು ಭಾರತದ ಹೈಎಂಡ್ ಸೆಡಾನ್ ಸೆಗೆ¾ಂಟ್‌ನಲ್ಲಿ ಹೊಸ ಮೈಲಿಗಲ್ಲಾಗಲಿವೆ ಎಂದರು.
ಕ್ರಿಯಾತ್ಮಕ ಮತ್ತು ನ್ಪೋರ್ಟಿ ಡ್ರೈವ್ ನೋಟವನ್ನು ನೀಡುವ ಈ ಕಾರುಗಳಲ್ಲಿ ಸಿ-300 ಡಿ (ಎಎಂಜಿ ಲೈನ್) ಹಾಗೂ ಸಿ-220 ಅತ್ಯಧಿಕ ಗುಣಮಟ್ಟವುಳ್ಳ ಶಕ್ತಿಶಾಲಿ ಓಎಂ 654 ಎಂಜಿನ್ ಅಳವಡಿಸಲಾಗಿದೆ. ಅತಿ ಕಡಿಮೆ ಪ್ರಮಾಣದ ಶಬ್ಧ ಮತ್ತು ಕಂಪನವನ್ನುಂಟು ಮಾಡುವ ಇವುಗಳಲ್ಲಿ ನಿರ್ದಿಷ್ಟ ಹೊಂದಾಣಿಕೆಯುಳ್ಳ ಮುಂಬದಿ ಹಾಗೂ ಹಿಂಬದಿ ಏಪ್ರನ್ಸ್ ಹಾಗೂ ಮಲ್ಟಿಬೀಮ್ ಎಲ್‌ಇಡಿ ಹೆಡ್‌ಲ್ಯಾಂಪ್ಸ್‌ಗಳಿವೆ.
ಒಳಾವರಣವನ್ನು ಮೇಲ್ದರ್ಜೆಗೇರಿಸಿ 10.25 ಇಂಚಿನ ಮೀಡಿಯಾ ಡಿಸ್‌ಪ್ಲೇ ಸೀನ್ ಹಾಗೂ ಟೆಲಿಮ್ಯಾಟಿಕ್ಸ್ ಅಳವಡಿಸಲಾಗಿದೆ. ಬಹುತೇಕ ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳಿಂದ ಕೂಡಿರುವ ಡ್ಯಾಶ್‌ಬೋರ್ಡ್ ಚಾಲಕರನ್ನು ಆಕರ್ಷಿಸಲಿದೆ. ಆ ಮೂಲಕ 6500 ಬಿಡಿಭಾಗಗಳನ್ನು ಬದಲಾಯಿಸಿ ಹೊಸ ಸಿ-ಕ್ಲಾಸ್ ಸರಣಿಗೆ ಮತ್ತಷ್ಟು ಆಕರ್ಷಕ ರೂಪ ಕೊಡಲಾಗಿದೆ.
ನ್ಯೂ ಸಿ-220 ಡಿ ಪ್ರೈಮ್ 40 ಲಕ್ಷ ರೂ., ಸಿ-220 ಡಿ ಪ್ರೊಗ್ರೆಸ್ಸಿವ್ 44.25 ಲಕ್ಷ ರೂ. ಹಾಗೂ ಸಿ-300 ಡಿ ಎಎಂಜಿ ಲೈನ್ 48.50 ಲಕ್ಷ ರೂ. (ಎಲ್ಲವೂ ಭಾರತದ ಎಕ್ಸ್‌ಶೋರೂಂ)ನಲ್ಲಿ ಲಭ್ಯ ಎಂದು ಅವರು ತಿಳಿಸಿದರು.