ಬೆಂಗಳೂರು: ನಗರದ ಸುಂದರಂ ಮೋಟಾರ್ನ ಎಎಂಜಿ ಪರ್ಫಾಮೆನ್ಸ್ ಸೆಂಟರ್‌ನಲ್ಲಿ ಐಷಾರಾಮಿ ಮರ್ಸಿಡಿಸ್ ಎಎಂಜಿ 43 ಶ್ರೇಣಿಯ ನೂತನ ಎಎಂಜಿ ಸಿ-43 ಕೂಪೆ ಕಾರನ್ನು ಶನಿವಾರ ಅನಾವರಣಗೊಳಿಸಲಾಯಿತು.
ಮಾರುಕಟ್ಟೆಯಲ್ಲಿ ಈಗಾಗಲೇ ಎಎಂಜಿ 43 ಲೈನ್ ಶ್ರೇಣಿಯ ಕಾರು ಗ್ರಾಹಕರನ್ನು ಆಕರ್ಷಿಸಿದ್ದು, ಈಗ ಎರಡು ಬಾಗಿಲುಗಳುಳ್ಳ ಸಿ-43 ಕೂಪೆ ಕಾರು ಮೊಟ್ಟ ಮೊದಲ ಬಾರಿಗೆ ನಗರದಲ್ಲಿ ಬಿಡುಗಡೆಯಾಗಿದೆ.
ಕಾರ್ಯಕ್ರಮದಲ್ಲಿ ಮರ್ಸಿಡಿಸ್ ಬೆನ್ಜ್ ಮತ್ತು ಮರ್ಸಿಡಿಸ್-ಎಎಂಜಿ ವಿಶೇಷ ಪೋಷಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಟಿವಿಎಸ್ ಸುಂದರಂ ಮೋಟಾರ್ನ ಕಾರ್ಯನಿರ್ವಾಹಕ ನಿರ್ದೇಶಕ ಶರತ್ ವಿಜಯರಾಘವನ್ ಮಾತನಾಡಿ, ಸುಂದರ್ ಮೋಟಾರ್ ಖಾತೆಗೆ ಮತ್ತೂಂದು ವಿಶ್ವ ದರ್ಜೆಯ ಎಎಂಜಿ ಕಾರನ್ನು ಸೇರಿಸಲು ನಾವು ಉತ್ಸುಕರಾಗಿದ್ದೇವೆ.
ಉದ್ಯಾನ ನಗರಿಯ ಮರ್ಸಿಡಿಸ್-ಎಎಂಜಿ ಗ್ರಾಹಕರಿಗೆ ಸ್ಥಾಪಿತವಾದ ಎಎಂಜಿ ಪರ್ಫಾಮೆನ್ಸ್ ಸೆಂಟರ್ ಯಶಸ್ವಿಯಾಗಿ 5ನೇ ವರ್ಷ ಪೂರೈಸುತ್ತಿದೆ. ಡ್ರೈವಿಂಗ್ ಪ್ಯಾಷನ್‌ವುಳ್ಳ ಯುವ ಕಾರು ಪ್ರಿಯರಿಗೆ ಈ ಕಾರನ್ನು ಪರಿಚಯಿಸುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಎಎಂಜಿ ಪರ್ಫಾಮೆನ್ಸ್ ಸೆಂಟರ್‌ನ ಸ್ಥಾನ ಮತ್ತಷ್ಟು ದೃಢವಾಗಲಿದೆ ಎಂದರು.
ವಿಶಿಷ್ಟತೆಗಳು: ಎಎಂಜಿ ಸಿ-43 ಕೂಪೆ, 3.08 ಲೀಟರ್ ವಿ6 ಬಿ ಟಬೋ ಎಂಜಿನ್ನಿಂದ 287ಕೆಡಬ್ಲ್ಯೂ (390 ಎಚ್‌ಪಿ) ಮತ್ತು 520ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕೇವಲ 4.7 ಸೆಕೆಂಡುಗಳಲ್ಲಿ 0ಯಿಂದ 100 ಕಿ.ಮೀ. ವೇಗವನ್ನು ಸಾಧಿಸಲು ಸಹಾಯ ಮಾಡುತ್ತದೆ.
ಇದರ ಸುಧಾರಿತ ವೈಶಿಷ್ಟಗಳಲ್ಲಿ ಫ್ರಂಟ್ ಪ್ರೋರ್ಟಿ ಸೀಟುಗಳು, ಹೊಸ ಪೀಳಿಗೆಯ ಟೆಲಿಮ್ಯಾಟಿಕ್ ಎನ್‌ಜಿಟಿ 5.5, 10.25 ಇಂಚಿನ ಹೈ ರೆಸೆಲ್ಯೂಷನ್ ಮೀಡಿಯಾ ಡಿಸ್‌ಪ್ಲೇ, ಪನೋರಮಿಕ್ ಸನ್‌ರೂಫ್, 64 ಬಣ್ಣಗಳಲ್ಲಿ ಆ್ಯಂಬಿಯಂಟ್ ಲೈಟಿಂಗ್, ಮಲ್ಟಿಬೀಮ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗ್ಳು ಇನ್ನಿತರ ವಿಶಿಷ್ಟ ಸೌಲಭ್ಯಗಳಿವೆ.
ಭಾರತದಲ್ಲಿ ಈ ಕಾರಿನ (ಎಕ್ಸ್‌ಶೋರೂಂ) ದರ 75 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಮಾಹಿತಿಗೆ, ಮೊ: 91481 55175 ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ.