Advertisement

Youth: ಯುವ ಶ್ರೇಯೋಭಿವೃದ್ಧಿಗೆ “ಮೇರಾ ಯುವ ಭಾರತ್‌”

08:14 PM Oct 11, 2023 | Team Udayavani |

ನವದೆಹಲಿ: ದೇಶದ ಯುವ ಸಮುದಾಯದ ಶ್ರೇಯೋಭಿವೃದ್ಧಿಯ ನಿಟ್ಟಿನಲ್ಲಿ ಕೇಂದ್ರ ಸರ್ಕಾರ “ಮೇರಾ ಯುವ ಭಾರತ್‌’ ಎಂಬ ಸ್ವಾಯತ್ತ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಸಂಪುಟದ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌ ಉದ್ದೇಶಿತ ಸಂಸ್ಥೆಯನ್ನು ಅ.31ರಂದು ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ಅವರ ಜನ್ಮದಿನದಂದು ಉದ್ಘಾಟಿಸಲಾಗುತ್ತದೆ ಎಂದು ಹೇಳಿದ್ದಾರೆ. ತಂತ್ರಜ್ಞಾನವನ್ನೇ ಕೇಂದ್ರೀಕರಿಸಿಕೊಂಡು ಈ ಸಂಸ್ಥೆಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ.

ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿ ಇರುವ ಭಾರತ ಮೂಲದ ಯುವಜನರಲ್ಲಿ ದೇಶವನ್ನು ಪ್ರಭಾವಶಾಲಿಯಾಗಿ ಕಟ್ಟುವ ನಿಲುವು ಬೆಳೆಸುವ ನಿಟ್ಟಿನಲ್ಲಿ ಹೊಸ ಸಂಸ್ಥೆ ಸ್ಥಾಪಿಸಲಾಗುತ್ತಿದೆ. ಅದರ ಮೂಲಕ ದೇಶವನ್ನು ಸಶಕ್ತ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ನಿರ್ಮಿಸಲು ಸಾಧ್ಯವಾಗಲಿದೆ ಎಂದರು.

ಅನುಕೂಲಗಳೇನು?:
ಯುವ ಸಮುದಾಯದಲ್ಲಿ ನಾಯಕತ್ವ ಗುಣ ಅಭಿವೃದ್ಧಿ, ಸಮುದಾಯದ ಅಗತ್ಯ ಮತ್ತು ಯುವಜನರ ಆಶಯಗಳ ನಡುವೆ ಸಮನ್ವಯತೆ, ಯುವ ಸಮುದಾಯದ ಅಭಿವೃದ್ಧಿಗೆ ಇರುವ ಯೋಜನೆಗಳನ್ನು ಸಂಯೋಜನೆಗೊಳಿಸಿ ಜಾರಿ, ವಿವಿಧ ಸಚಿವಾಲಯಗಳು ಮತ್ತು ಯುವ ಜನರ ನಡುವೆ ಸಂಪರ್ಕಕ್ಕೆ ಒಂದು ಕೇಂದ್ರ, ಯುವ ಸಮುದಾಯದವರ ಮಾಹಿತಿ ಮತ್ತು ದಾಖಲೆಗೆ ಏಕೀಕೃತ ವ್ಯವಸ್ಥೆ, ಯುವಜನತೆಗೆ ಅಗತ್ಯವಾಗಿರುವ ಭೌತಿಕ ಪರಿಸರ ನಿರ್ಮಾಣ ಮಾಡಲು ಇದರಿಂದ ನೆರವಾಗಲಿದೆ.

ಲೀಥಿಯಂಗೆ ರಾಯಲ್ಟಿ
ಮೊಬೈಲ್‌ಗ‌ಳ ಬ್ಯಾಟರಿ ತಯಾರಿಕೆಯಲ್ಲಿ ಬಳಕೆ ಮಾಡಲು ಬೇಕಾಗುವ ಲೀಥಿಯಂಗೆ ಶೇ.3ನ್ನು ರಾಯಧನ ನೀಡಲು ಇದೇ ಮೊದಲ ಬಾರಿಗೆ ತೀರ್ಮಾನಿಸಲಾಗಿದೆ. ಇದಲ್ಲದೆ ನಿಯೋಬಿಯಮ್‌ಗೆ ಶೇ.3 ಮತ್ತು ಭೂಮಿಯಲ್ಲಿ ಇರುವ ಅತ್ಯಂತ ಅಪರೂಪದ ಖನಿಜಗಳಿಗೆ (ಆರ್‌ಇಇ)ಶೇ.1 ರಾಯಧನ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ. ಇದರಿಂದಾಗಿ ಗಣಿಗಾರಿಕೆ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶಗಳು ಹೆಚ್ಚಾಗುವ ನಿರೀಕ್ಷೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next