Advertisement

ಸೂಲಗಿತ್ತಿಯರು: ಸ್ತ್ರೀ ಹಕ್ಕುಗಳ ರಕ್ಷಕರು

09:45 AM May 13, 2019 | Sriram |

ಮುಂದುವರಿದುದು-

Advertisement

ಹಂತ 1
ಕೈಗಳನ್ನು ಸೊಂಟದ ಮೇಲೆ ಇರಿಸಿಕೊಂಡು, ತೋಳುಗಳನ್ನು ನೇರವಾಗಿರಿಸಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಆರಂಭಿಸಬೇಕು

ಎ) ಸ್ತನಗಳು ಸಾಮಾನ್ಯ ಗಾತ್ರ, ಆಕಾರ ಮತ್ತು ಬಣ್ಣದಲ್ಲಿವೆ.
ಬಿ) ಸ್ತನಗಳು ದೃಷ್ಟಿ ಗೋಚರವಾಗುವ ಯಾವುದೇ ಅಸಹಜತ ಅಥವಾ ಊತ ಇಲ್ಲದೆ ಸಹಜವಾಗಿವೆ.
ಸಿ) ಗುಳಿ ಬಿದ್ದಿರುವುದು ಅಥವಾ ಚರ್ಮ ಜೋತಿರುವುದು.
ಡಿ) ಸ್ತನದ ತೊಟ್ಟಿನ ಸ್ಥಾನ ಬದಲಾಗಿರುವುದು ಅಥವಾ ಒಳಕ್ಕೆ ಅಂಟಿಕೊಂಡಿರುವುದು.
ಇ) ಕೆಂಪಾಗಿರುವುದು, ಬಾವು, ದದ್ದುಗಳು ಅಥವಾ ಊತ

ಹಂತ 2
ಈಗ ನಿಮ್ಮ ತೋಳುಗಳನ್ನು ಮೇಲಕ್ಕೆತ್ತಿ ಕೆಲವು ಬದಲಾವಣೆಗಳನ್ನು ಗಮನಿಸಿ.
ಸ್ತನದ ಸ್ವಯಂ ತಪಾಸಣೆ ಪಕ್ಕೆಲುಬು, ಕಂಕುಳ, ಎದೆಯ ಮಧ್ಯಭಾಗ, ಎದೆಗೂಡಿನ ಕೆಳಭಾಗದ ತನಕ ಪರೀಕ್ಷಿಸಿ.

ಹಂತ 3
ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಒಂದು ಅಥವಾ ಎರಡೂ ಸ್ತನತೊಟ್ಟುಗಳಿಂದ ಯಾವುದೇ ಸ್ರಾವ ಇರುವ ಲಕ್ಷಣಗಳಿವೆಯೇ ಎಂಬುದನ್ನು ಗಮನಿಸಿ (ನೀರಿನಂತಿರಬಹುದು, ಹಾಲಿನಂತಿರಬಹುದು ಅಥವಾ ಹಳದಿ ಯಾ ರಕ್ತವಾಗಿರಬಹುದು).

Advertisement

ಹಂತ 3
ಈಗ ಮಲಗಿಕೊಂಡು ಸ್ತನಗಳನ್ನು ಪರೀಕ್ಷಿಸಿ. ಬಲಗೈಯಿಂದ ಎಡ ಸ್ತನವನ್ನು, ಎಡಗೈಯಿಂದ ಬಲ ಸ್ತನವನ್ನು ತಪಾಸಿಸಿ. ಕೈಬೆರಳುಗಳನ್ನು ಜತೆಯಾಗಿಸಿ ಮಟ್ಟಸವಾಗಿರಿಸಿ ಕೊಂಡು ಮೃದುವಾದ ಆದರೆ ದೃಢವಾದ ಸವರುವಿಕೆ ಯಿಂದ ಪರೀಕ್ಷಿಸಿ. ವೃತ್ತವಾಗಿ ಸುತ್ತುತ್ತಾ ಒತ್ತಿ ಪರೀಕ್ಷಿಸಿ.

-ಮುಂದುವರಿಯುವುದು

Advertisement

Udayavani is now on Telegram. Click here to join our channel and stay updated with the latest news.

Next