Advertisement
ಸಪ್ತಶತಿಯ ವೈಶಿಷ್ಟ್ಯ ಎಂದರೆ ಅದು ಅನೇಕ ಔಷಧೀಯ ಸಸ್ಯಗಳು ಮತ್ತು ಹೂವು ಹಣ್ಣುಗಳ ವಿವರವನ್ನು ಒಳಗೊಂಡಿದೆ.
ಬಂಧೂಕ (ಮಿಡ್ಡೇ ಫ್ಲವರ್): ಅರ್ಧನಾರೀಶ್ವರನ ಆಶ್ರಯ ದಲ್ಲಿರುವ ನಾನು ಸದಾ ನೆಲೆಸುತ್ತೇನೆ. ಅವನ ಬಣ್ಣ ಬಂಧೂಕ ಪುಷ್ಪದಂತಿದೆ. ಸ್ವರ್ಣದ ಬಣ್ಣ, ಕೆಂಪು ಹಳದಿಯುಕ್ತ. ವಿಭೀ ಟಕೀ ಪುಷ್ಪದ ಹಾರವನ್ನು ಧರಿಸಿದವನು. ಪಾಶಾಂಕುಶ, ವರದ ಮುದ್ರೆಯ ಭಂಗಿಯು ಅವನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ತ್ರಿನೇತ್ರನಾದ ಅವನು ಅರ್ಧಚಂದ್ರ ಆಭರಣವನ್ನು ಧರಿಸಿದ್ದಾನೆ ಎಂದು ವರ್ಣಿಸಲಾಗಿದೆ.
Related Articles
Advertisement
ಕಹ್ಲಾರ ಪುಷ್ಪ: ಕಹ್ಲಾರ ಪುಷ್ಪದ ಹಾರ ದೇವಿಯ ದಿವ್ಯ ಕಾಂತಿಯನ್ನು ಮತ್ತಷ್ಟು ವೃದ್ಧಿಸಿದೆ. ಮಾತುಲಿಂಗ, ಮಾತುಲುಂಗ, ಚಕೋತ (ಸಿಟ್ರಸ್ ಹಣ್ಣು): ಸಪ್ತಶತಿಯ ಪ್ರಾಧಾನಿಕ ರಹಸ್ಯಂ ಎಂಬ ಭಾಗದಲ್ಲಿ ಇದರ ವರ್ಣನೆಯಿದೆ.
ಪಾರಿಜಾತ: ಶುಂಭ ಎಂಬ ರಾಕ್ಷಸ ರಾಜನನ್ನು ಚಂಡ ಮುಂಡರು ಅರ್ಚಿಸುತ್ತಿರುವಾಗ ಪಾರಿ ಜಾತ ಪುಷ್ಪದ ವರ್ಣನೆಯಿದೆ.
ಸಪ್ತಶತಿ ಉಕ್ತ ವಿವಿಧ ಪುಷ್ಪಗಳ ಔಷಧೀಯ ಗುಣಗಳು ಕಮಲ ಪುಷ್ಪ ರುಚಿಯಲ್ಲಿ ಸಿಹಿ. ಶೀತ ಜಾತಿ. ಕಫಪಿತ್ತ ನಿವಾರಕ. ಅತಿಸಾರ ವಿರೋಧಿ. ಮೈಬಣ್ಣವನ್ನು ಹೆಚ್ಚಿಸುತ್ತದೆ. ರಕ್ತಪಿತ್ತ , ಡಿಪ್ಸಿಯಾ, ಸುಡುವ ಸಂವೇದನೆ, ವಿಷತ್ವ, ಇಸಬು, ಉರಿಗಾಯ, ಮುಂತಾದ ಚಿಕಿತ್ಸೆಯಲ್ಲಿ ಉಪಯೋಗಿ. ತ್ರಿಫಲ, ಆಯುರ್ವೇದದ ಒಂದು ಸೂತ್ರ ನಿರೂಪಣೆ. ಇದು ತ್ರಿದೋಷವನ್ನು ನಿವಾರಿಸುತ್ತದೆ. ಕಫ ಚಿಕಿತ್ಸೆಯಲ್ಲಿ ಇದನ್ನು ಹೆಚ್ಚು ಬಳಸಲಾಗುತ್ತದೆ. ದೃಷ್ಟಿ ದೋಷ ದೂರ ವಾಗುವುದು. ವಯಸ್ಸಿಗೆ ಮೊದಲೇ ತಲೆಕೂದಲು ಬಿಳಿಯಾ ಗುವುದನ್ನು ತಡೆಗಟ್ಟುತ್ತದೆ. ಕಂಠದೋಷ, ಮೂಗು ಸಂಬಂ ಧೀ ದೋಷ, ರಕ್ತದಲ್ಲಿ ದೋಷ, ಗಂಟಲು ಸಮಸ್ಯೆ, ಹೃದಯ ಸಂಬಂಧೀ ರೋಗ ಚಿಕಿತ್ಸೆಗಳಲ್ಲಿ ಇದರ ಹಣ್ಣು ಸಹಕಾರಿ. ಶ್ರೀಗಂಧ ಸುಗಂಧಭರಿತ ಮತ್ತು ತಂಪು. ಸುಗಂಧ ವಾದ್ದರಿಂದ ಅದು ಗಂಧಸಾರ, ಸಂಸ್ಕೃತದಲ್ಲಿ. ಆಯುರ್ವೇದ ಸಂಹಿತೆ ಮತ್ತು ನಿಘಂಟುಗಳಲ್ಲಿ ಗಂಧದ ಕುರಿತಂತೆ ಉಲ್ಲೇಖ ಗಳಿವೆ. ಚರಕ ಸಂಹಿತೆಯಲ್ಲಿ ದಾಹಪ್ರಶಮನ, ಅಂಗಮ ರ್ಧಪ್ರಶಮನ, ತ್ರಿಷ್ಣನಿಗ್ರಹಣ, ವರ್ಣ್ಯ, ಕಂಡೂಘ್ನ ಮತ್ತು ತಿಕ್ತಸ್ಕಂದ ಇತ್ಯಾದಿಗಳಲ್ಲಿ ಮತ್ತು ಸುಶ್ರುತ ಸಂಹಿತೆಯ ಪ್ರಿಯಂಗವಾದಿ ಗಣ, ಗುಡೂಚ್ಯಾದಿ ಮತ್ತು ಪಿತ್ತಸಂಶಮನ ಗಣದಲ್ಲಿ ಗಂಧದ ವಿವರಣೆಗಳಿವೆ. ಕಫಪಿತ್ತ, ರಕ್ತಪಿತ್ತವನ್ನು ಹೋಗಲಾಡಿಸುತ್ತದೆ. ಮಾತುಲುಂಗ ಮಾದಿಫಲದ ಹೂವು ರಕ್ತಪಿತ್ತ, ವಾತಪಿತ್ತ, ಕಫವಾತ ಚಿಕಿತ್ಸೆಯಲ್ಲಿ ಬಳಸಲ್ಪಡುತ್ತದೆ. ಪಾರಿಜಾತದ ಹೂವು ಜ್ವರ ನಿವಾರಕ, ಉತ್ತಮ ಟಾನಿಕ್, ಜೀರ್ಣಕಾರಿ, ಶುದ್ಧಿಕಾರಕ ಮತ್ತು ನೋವು ನಿವಾರಕದ ಉತ್ತಮ ಔಷಧವಾಗಿದೆ. ಅದರ ಎಲೆಯ ರಸ, ಅಲರ್ಜಿ ನಿವಾರಕ.
ಕಲ್ಹಾರ ಹೂವು ಉತ್ತಮ ಹೃದಯ ಸಂಬಂಧೀ ಟಾನಿಕ್. ಕಾಲರಾ, ಅತಿಸಾರ, ಜ್ವರ, ಉದ್ವೇಗ, ಭೇದಿ ನಿವಾರಕ ಔಷಧ. ಈ ಗಿಡದ ಬೇರಿನಿಂದ ತಯಾರಿಸುವ ಕಷಾಯ ಮೂತ್ರಕೋಶ ನೋವು ಉಪಶಮನಕಾರಿ. ಇದರಿಂದ ಬಾಯಿ ಮುಕ್ಕಳಿಸಿದರೆ ಗಂಟಲು ಕೆರತ ನಿವಾರಣೆಯಾಗುತ್ತದೆ. ಬಂಧುಜೀವ ಹೂವು ವಾತಪಿತ್ತ, ಕಫ, ಮುಂತಾದ ತ್ರಿದೋಷ ನಿವಾರಕ. ಜ್ವರ, ಹೃದಯ ಕಾಯಿಲೆಗಳಿಗೆ ಉತ್ತಮ ಔಷಧ.
ಪಾತಲ, ವಾತಪಿತ್ತ, ರಕ್ತಪಿತ್ತ, ಹೊಟ್ಟೆ ಸುಡುವ ಸಂವೇದನೆ ಇತ್ಯಾದಿ ದೋಷಗಳಿಗೆ ಔಷಧವಾಗಿದೆ. ದುರ್ಗೆ ದುರಿತ ನಿವಾರಿಣಿ. ಸಾವಿರಾರು ವರ್ಷಗಳ ಹಿಂದೆ ಭಾರತದ ನೆಲದಲ್ಲಿ ರಚಿಸಲ್ಪಟ್ಟ ಈ ಗ್ರಂಥದಲ್ಲಿ ಔಷಧೀಯ ಸಸ್ಯಗಳ ಮಹತ್ವವನ್ನೂ ವರ್ಣಿಸಲಾಗಿದ್ದು ದೇವಾತಾರ್ಚನೆ ಮತ್ತು ವಿವಿಧ ಕಾಯಿಲೆಗಳ ನಿವಾರಣೆಗಾಗಿ ಔಷಧಕ್ಕೂ ಬಳಸಲಾಗುತ್ತಿತ್ತು.