Advertisement

ಬೀದರ ವಲಯ ಪುರುಷರವಾಲಿಬಾಲ್‌ ಪಂದ್ಯಕ್ಕೆ ಚಾಲನೆ

12:39 PM Aug 20, 2017 | |

ಭಾಲ್ಕಿ: ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಂಡು ಆಟಗಳಲ್ಲಿ ಭಾಗವಹಿಸಬೇಕು ಎಂದು ಶಾಂತಿ ವರ್ಧಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ| ವಿ.ಎಸ್‌. ಕಟ್ಟಿಮನಿ ಹೇಳಿದರು. ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆàಯ ಶ್ರೀ ಚನ್ನಬಸವೇಶ್ವರ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಗುಲಬರ್ಗಾ ವಿಶ್ವವಿದ್ಯಾಲಯದ ಬೀದರ ವಲಯ ಪುರುಷರ ವಾಲಿಬಾಲ್‌ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರೀಡಾಪಟಗಳು ಸೋಲು
ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಇದಕ್ಕೆ ಕ್ರೀಡಾ ಮನೋಭಾವ ಅತ್ಯವಶ್ಯ ಎಂದು ಹೇಳಿದರು. ಪ್ರಾಂಶುಪಾಲ ಪ್ರೊ| ಎಸ್‌.ಎಸ್‌. ರಾಮಪೂರೆ ಮಾತನಾಡಿ, ಜಿಲ್ಲೆಯ 14 ಕಾಲೇಜುಗಳ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಷಯವಾಗಿದೆ. ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸು ಇರುತ್ತದೆ. ಅದಕ್ಕಾಗಿ ಯುವಶಕ್ತಿ ತನ್ನ ಸಂಚಲನ ತೋರಿಸಬೇಕು ಎಂದು ಹೇಳಿದರು. ಪ್ರೊ| ಎಸ್‌.ಎನ್‌. ಶಿವಣಕರ್‌, ಪ್ರೊ| ಎಚ್‌.ಮುಕ್ತೆದಾರ, ಪ್ರೊ| ಎಸ್‌. ಎಚ್‌. ಖಾದ್ರಿ ಹಾಗೂ ವಿವಿಧ ಕಾಲೇಜುಗಳ ತಂಡದ ವ್ಯವಸ್ಥಾಪಕರು,
ಸಿಬ್ಬಂದಿ ಹಾಜರಿದ್ದರು. ವಲಯ ಮಟ್ಟದ ಪಂದ್ಯಾವಳಿ ಸಂಘಟನಾ ಕಾರ್ಯದರ್ಶಿ ಎಸ್‌.ಕೆ. ವೈರಾಗೆ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next