ಭುವನೇಶ್ವರ: ಭಾರತದ ಆತಿಥ್ಯದಲ್ಲಿ ಮುಂದಿನ ಜನವರಿ 13ರಿಂದ 29ರ ತನಕ ನಡೆಯಲಿರುವ ಪುರುಷರ ವಿಶ್ವಕಪ್ ಹಾಕಿ ಪಂದ್ಯಾವಳಿಯ ಡ್ರಾ ಗುರುವಾರ ಪ್ರಕಟಗೊಂಡಿದೆ. 16 ತಂಡಗಳನ್ನು 4 ಗುಂಪುಗಳಾಗಿ ವಿಭಜಿಸಲಾಗಿದೆ. ಆತಿಥೇಯ ಭಾರತ “ಡಿ’ ವಿಭಾಗದಲ್ಲಿ ಸ್ಥಾನ ಸಂಪಾದಿಸಿದೆ.
ಭಾರತ ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದು, “ಡಿ’ ವಿಭಾಗದ ಉನ್ನತ ರ್‍ಯಾಂಕಿಂಗ್ ತಂಡವಾಗಿದೆ. ವಿಶ್ವದ ನಂ. 6 ತಂಡವಾದ ಇಂಗ್ಲೆಂಡ್, ಎರಡು ಬಾರಿಯ ಬೆಳ್ಳಿ ಪದಕ ವಿಜೇತ ತಂಡವಾದ ಸ್ಪೇನ್ ಮತ್ತು ವೇಲ್ಸ್ ಈ ವಿಭಾಗದ ಉಳಿದ ತಂಡಗಳು. ವೇಲ್ಸ್‌ಗೆ
ಇದು ಮೊದಲ ವಿಶ್ವಕಪ್ ಪಂದ್ಯಾ ವಳಿಯಾಗಿದೆ. ಹಾಗೆಯೇ “ಸಿ’ ವಿಭಾಗದಲ್ಲಿರುವ ಚಿಲಿ ಕೂಡ ಮೊದಲ ಸಲ ವಿಶ್ವಕಪ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದೆ.
ಗುರುವಾರ ಭುವನೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಎಫ್ಐಎಚ್ ಉಸ್ತು ವಾರಿ ಅಧ್ಯಕ್ಷ ಸಯೀಫ್ ಅಹ್ಮದ್, ರಾಜ್ಯ ಕ್ರೀಡಾ ಸಚಿವ ತುಷಾರ್‌ಕಾಂತಿ ಬೆಹೆರಾ ಮೊದಲಾದವರು ಉಪಸ್ಥಿತರಿದ್ದರು.
ಪಂದ್ಯಗಳು ಭುವನೇಶ್ವರದ “ಕಳಿಂಗ ಸ್ಟೇಡಿಯಂ’ ಮತ್ತು ರೂರ್ಕೆಲಾದ “ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಂ’ನಲ್ಲಿ ನಡೆಯಲಿವೆ.