Advertisement

Vogga ಸಮೀಪದ ಮೇನಾಡು: ನಗ-ನಗದು ದೋಚಿದ ಪ್ರಕರಣ: ಆರೋಪಿಗಳ ಪತ್ತೆಗೆ ಸಿಸಿ ಕೆಮರಾಗಳ ಪರಿಶೀಲನೆ

01:08 AM Jan 13, 2024 | Team Udayavani |

ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಸಮೀಪದ ಮೇನಾಡುನಲ್ಲಿ ಜ. 11ರ ಮುಂಜಾನೆ ತಂಡವೊಂದು ತಾಯಿ-ಮಗಳಿಗೆ ಚಾಕು ತೋರಿಸಿ 3.20 ಲಕ್ಷ ರೂ. ಮೌಲ್ಯದ ನಗ-ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಸಿಸಿ ಕೆಮರಾಗಳನ್ನು ಪರಿಶೀಲಿಸುವ ಜತೆಗೆ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ಅವರ ಮಾರ್ಗದರ್ಶನದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿ ಕೆಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಯು ಬಿ.ಸಿ.ರೋಡು-ಕಡೂರು ಹೆದ್ದಾರಿ ಬದಿಯಲ್ಲೇ ನಡೆದಿದ್ದು, ದರೋಡೆಕೋರರು ಹೆದ್ದಾರಿಯಲ್ಲೇ ಸಾಗಿದ್ದಾರೋ ಅಥವಾ ಒಳ ರಸ್ತೆಗಳನ್ನು ಬಳಸಿ ಪರಾರಿಯಾಗಿದ್ದಾರೋ ಎಂಬುದರ ಕುರಿತು ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಒಂದು ವೇಳೆ ಹೆದ್ದಾರಿಯಲ್ಲೇ ಪರಾರಿ ಆಗಿದ್ದರೆ ಘಟನೆಯು ಮುಂಜಾನೆಯ ವೇಳೆ ನಡೆದಿರುವುದರಿಂದ ಆ ವೇಳೆ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಕಡಿಮೆ ಇದ್ದು, ಕಳ್ಳರ ಪತ್ತೆಗೆ ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಜತೆಗೆ ಸ್ಥಳೀಯರಿಂದ ಈ ಕುರಿತು ಮಾಹಿತಿಯನ್ನೂ ಕಲೆ ಹಾಕುವ ಕಾರ್ಯವನ್ನು ಪೊಲೀಸರು ಮಾಡುತ್ತಿದ್ದಾರೆ.

ದರೋಡೆಕೋರರನ್ನು ಶೀಘ್ರ ಬಂಧಿಸುವ ಕುರಿತು ಪೊಲೀಸ್‌ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next