Advertisement

ಅಪಘಾತವಾಗಿ ಬಿದ್ದಿದ್ದ ಪಂತ್ ಗೆ ನೆರವು ನೀಡುವ ಬದಲು ಬ್ಯಾಗ್ ದೋಚಿದ ಕಿರಾತಕರು

02:48 PM Dec 30, 2022 | Team Udayavani |

ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ವಿಕೆಟ್ ಬ್ಯಾಟರ್ ರಿಷಭ್ ಪಂತ್ ಅವರು ಇಂದು ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಪಂತ್ ಹಣೆ, ಕಾಲು, ಬೆನ್ನಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅಪಾಯದಿಂದ ಪಾರಾಗಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

Advertisement

ಪ್ರತ್ಯಕ್ಷದರ್ಶಿಗಳ ಪ್ರಕಾರ, ಪಂತ್ ಕಾರು ಚಾಲನೆ ಮಾಡುವಾಗ ಮಣ್ಣಿನ ರಾಶಿಗೆ ಡಿಕ್ಕಿ ಹೊಡೆದು ಉರುಳಿದೆ. ಕಾರು ರಸ್ತೆಯಿಂದ ಆಚೆಗೆ ಪಲ್ಟಿಯಾಗಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ರೈಲಿಂಗ್ ಗಳಿಗೆ ಢಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ರಿಷಬ್ ಪಂತ್ ತಮ್ಮ ಕಾರಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಅವರ ಗಾಯಗಳಿಂದಾಗಿ ಅದು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.

ಸಮೀಪದಲ್ಲೇ ಇದ್ದ ಕೆಲವರು ಉರಿಯುತ್ತಿದ್ದ ಕಾರಿನ ಬಳಿಗೆ ಬಂದರು. ಅವರು ಕ್ರಿಕೆಟಿಗನಿಗೆ ಸಹಾಯ ಮಾಡುವ ಬದಲು ಕಾರಿನಲ್ಲಿದ್ದ ಬ್ಯಾಗ್‌ನಿಂದ ಹಣವನ್ನು ಕದ್ದು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:Rewind 2022: ಚಂದನವನದ ಚಿನ್ನದ ಬೆಳೆ, ಸ್ಯಾಂಡಲ್ ವುಡ್ ನಲ್ಲಿ ಒಂದು ಸುತ್ತು

ಪಂತ್ ಸ್ವತಃ ಕಿಟಕಿಯನ್ನು ಒಡೆದು ವಾಹನದಿಂದ ಹೊರ ಬಂದರು. ಅವರೇ ನಂತರ ಪೊಲೀಸ್ ಮತ್ತು ಆಂಬ್ಯುಲೆನ್ಸ್‌ ಗೆ ಕರೆ ಮಾಡಿದ್ದಾರೆಂದು ವರದಿಯೊಂದು ತಿಳಿಸಿದೆ.

Advertisement

ಮತ್ತೊಂದು ವರದಿಯ ಪ್ರಕಾರ, ಅಪಘಾತವನ್ನು ಮೊದಲು ಬಸ್ ಚಾಲಕನೊಬ್ಬ ನೋಡಿದ್ದು, ಆತ ಬಂದು ಪಂತ್ ರನ್ನು ವಾಹನದಿಂದ ಹೊರಕ್ಕೆ ಎಳೆದಿದ್ದಾನೆ. ಅವರೇ ಕಾರಿನ ಗಾಜು ಒಡೆದು ಪಂತ್ ರನ್ನು ಹೊರಗೆ ತಂದಿದ್ದಾರೆ ಎನ್ನಲಾಗಿದೆ.

ರೂರ್ಕಿಯ ನರ್ಸಾನ್ ಗಡಿ ಪ್ರದೇಶದ ಹಮ್ಮದ್‌ ಪುರ್ ಝಾಲ್‌ ನಲ್ಲಿ ನಡೆದ ಅಪಘಾತದಲ್ಲಿ ಪಂತ್ ಕಾರು ಸುಟ್ಟುಹೋಗಿದೆ. ಕಾರು ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next