Advertisement

ಈನಂ ಗಂಭೀರ್‌ ಮೊಬೈಲ್‌ ದೋಚಿ ಪರಾರಿಯಾದ ಕಳ್ಳರು 

07:05 AM Dec 26, 2017 | Harsha Rao |

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಟೆರರಿಸ್ತಾನ ಎಂದು ಕರೆದು ಪಾಕ್‌ ಬಾಯಿ ಮುಚ್ಚಿಸಿದ್ದ ಭಾರತದ ರಾಜತಾಂತ್ರಿಕ ಅಧಿಕಾರಿ ಈನಂ ಗಂಭೀರ್‌ ಅವರ ಮೊಬೈಲ್‌ ಫೋನ್‌ ಅನ್ನು ದುಷ್ಕರ್ಮಿಗಳು ದೋಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ವಿಶ್ವಸಂಸ್ಥೆಯ ಭಾರತದ ಶಾಶ್ವತ ಮಿಷನ್‌ನ ಮೊದಲ ಕಾರ್ಯದರ್ಶಿಯಾಗಿರುವ ಏನಂ, ರಜೆಗೆಂದು ದೆಹಲಿಗೆ ಬಂದಿದ್ದರು. ಶನಿವಾರ ರಾತ್ರಿ ಊಟದ ಬಳಿಕ ತಮ್ಮ ತಾಯಿ ಜೊತೆ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ವಿಳಾಸ ಕೇಳುವ ನೆಪದಲ್ಲಿ ಅವರ ಫೋನ್‌ ದೋಚಿದ್ದಾರೆ. 

Advertisement

ಸಂಜೆ ವೇಳೆಯಾದ್ದರಿಂದ ಅವರಿಗೆ ಬೈಕಿನ ನಂಬರ್‌ ದಾಖಲಿಸಿಕೊಳ್ಳಲಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. “ಬೈಕಿನಲ್ಲಿ ಬಂದ ಇಬ್ಬರು ನನಗೆ ಹನುಮಾನ್‌ ಮಂದಿರದ ದಾರಿಯನ್ನು ಕೇಳಿದರು. ನಾನು ತೋರಿಸಲು ಮುಂದಾದಾಗ ಕೈಯಲ್ಲಿದ್ದ ಮೊಬೈಲ್‌ ಕಸಿದು ವೇಗವಾಗಿ ಬೈಕ್‌ನಲ್ಲಿ ಪರಾರಿಯಾದರು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next