ಮುಜಫರನಗರ : ಪೊಲೀಸರ ರೈಫಲ್‌ಗಳನ್ನು ಲೂಟಿಗೈದ ಆರೋಪದಲ್ಲಿ ಬಂಧಿತರಾಗಿರುವ ಮೂವರು ವ್ಯಕ್ತಿಗಳು ಖಾಲಿಸ್ಥಾನ್ ಲಿಬರೇಶನ್ ಫ್ರಂಟ್ ಜತೆಗೆ ನಂಟು ಹೊಂದಿದವರಾಗಿದ್ದು ಇವರು ಮಾಜಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರನ್ನು ಹತ್ಯೆಗೈವ ಸಂಚು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ತಾವು ಮಾಜಿ ಸಿಎಂ ಬಾದಲ್ ಅವರನ್ನು ಹತ್ಯೆ ಗೈವ ಉದ್ದೇಶದಿಂದ ಪೊಲೀಸರ ರೈಫಲ್‌ಗಳನ್ನು ಕಸಿದುಕೊಂಡಿದ್ದೆವು ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂಬುದಾಗಿ ಎಡಿಜಿ ಪ್ರಶಾಂತ್ ಕುಮಾರ್ ಅವರು ಶಾಮ್ಲಿ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಬಂಧಿತ ಆರೋಪಿಗಳ ಗ್ಯಾಂಗಿನ ಇನ್ನಿಬ್ಬರು ಸದಸ್ಯರು ತಲೆಮರೆಸಿಕೊಂಡಿದ್ದಾರೆ ಎಂದವರು ಹೇಳಿದರು.