ಬೆಳ್ತಂಗಡಿ: ತೋಟಕ್ಕೆಂದು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಮಡ್ಯ ಎಂಬಲ್ಲಿ ಸೋಮವಾರ (ಜು.4) ಪತ್ತೆಯಾಗಿದೆ.
ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ(65) ಮೃತ ದುರ್ದೈವಿ.
ಲಿಂಗಪ್ಪ ಅವರು ಜೂ. 30ರಂದು ತೋಟಕ್ಕೆ ಹೋದ ಬಳಿಕ ನಾಪತ್ತೆಯಾಗಿದ್ದು, ಹೊಳೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಹೊಳೆ ಪ್ರದೇಶದಲ್ಲಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು. ಆದರೆ ಯಾವುದೇ ಸುಳಿವು ಕಂಡುಬಂದಿರಲಿಲ್ಲ. ಸೋಮವಾರ ಅವರ ಮೃತದೇಹ ತೋಟದಿಂದ ಒಂದೂವರೆ ಕಿ.ಮೀ ಕೆಳಭಾಗದ ಮಡ್ಯ ಎಂಬಲ್ಲಿ ಕಂಡು ಬಂದಿದೆ.
ಇದನ್ನೂ ಓದಿ: ಕೊಳ್ಳೇಗಾಲ: ಎರಡು ದಿನದ ಗಂಡು ಮಗುವನ್ನು ಕಸದ ರಾಶಿಗೆ ಎಸೆದ ತಾಯಿ
ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಧರ್ಮಸ್ಥಳ ಠಾಣಾ ಪಿ.ಎಸ್.ಐ.ಎ.ಕೃಷ್ಣಕಾಂತ ಪಾಟೀಲ್ ಮತ್ತು ತಂಡದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.