ಮಣಿಪಾಲ: ಕರುನಾಡಿನ ನಿತ್ಯೋತ್ಸವದ ಕವಿ ಪ್ರೊಫೆಸರ್ ನಿಸಾರ್ ಅಹಮ್ಮದ್ ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ನಿಸಾರ್ ಅವರನ್ನು ನೀವು ಹೇಗೆ ನೆನಪಿಸಿ ಕೊಳ್ಳಬಯಸುತ್ತೀರಿ ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ಗಿರೀಶ.ಎಂ.ಆರ್ ಮಾಸ್ತಿ: ಜೋಗದ ಸಿರಿ ಇರುವವರೆಗು ಇವರು ಅಜರಾಮರಾಗಿರುತ್ತಾರೆ.
ನಾಗಪ್ಪ ಚಿಕ್ಕಮಗಳೂರು: ಕನ್ನಡದಲ್ಲಿ ಮತ್ತೆ ಹುಟ್ಟಿ ಕನ್ನಡ ಕವಿತೆಗಳನ್ನು ರಚಿಸಿ.
ದೀಪಕ್: ಕನ್ನಡದ ಹಿರಿಯ ಸಾಹಿತಿಗೆ ನಮನಗಳು. ಮತ್ತೆ ಕನ್ನಡ ಮಣ್ಣಲ್ಲಿ ಹುಟ್ಟಿ ಬನ್ನಿ ಸರ್.
ರಾಜಶೇಖರ್ ಕನಕುಪ್ಪಿ: ಶ್ರೇಷ್ಠ ಕನ್ನಡಿಗ ನಿತ್ಯೋತ್ಸವ ಕವಿ
ಹರೀಶ್ ಕುಮಾರ್: ಕನ್ನಡ ಕಂಡ ಅದ್ಭುತ ಸಾಹಿತಿಗಳಲ್ಲಿ ಓರ್ವ ನಿಸಾರ್ ಸರ್. ಕರ್ನಾಟಕದ ಚೆಲುವನ್ನು ನಿತ್ಯೋತ್ಸವದ ಮೂಲಕ ಪ್ರಸಿದ್ದಿ ಮಾಡಿದವರು. ಹೋಗಿ ಬನ್ನಿ ಸರ್